ದೊಡ್ಡ ಘೇಂಡಾಮೃಗವೊಂದು ನಿಮ್ಮ ಕಡೆಗೆ ಓಡುತ್ತಿರುವುದನ್ನು ನೀವು ನೋಡಿದರೆ ಏನು ಮಾಡುತ್ತೀರಿ? ಬಹುಶಃ ಓಡಿಹೋಗಬಹುದು. ಇಲ್ಲವೇ ಬೆಚ್ಚಿಬಿದ್ದು ಕೈಕಾಲು ಆಡದೇ ಅಲ್ಲಿಯೇ ಗಡಗಡ ನಡುಗುತ್ತಾ ನಿಲ್ಲಬಹುದು ಅಲ್ಲವೆ?
ಘೇಂಡಾಮೃಗವು ತನ್ನ ವಾಹನವನ್ನು ಇಣುಕಿ ನೋಡುತ್ತಿರುವುದನ್ನು ಕಂಡ ಆಟೋ ಚಾಲಕನು ಅಲ್ಲಿಂದ ಓಡಿ ಹೋಗಿದ್ದು, ಈ ಭಯಾನಕ ಘಟನೆಯ ವಿಡಿಯೋ ವೈರಲ್ ಆಗಿದೆ. ಈ ಘಟನೆಯನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ ಅವರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಒಂದು ಬದಿಯಲ್ಲಿ ನಿಂತಿದ್ದ ಆಟೋರಿಕ್ಷಾವನ್ನು ನೋಡಿದ್ದ ಘೇಂಡಾಮೃಗ ರಿಕ್ಷಾದ ಒಳಗೆ ಹೋಗಲು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ. ರಸ್ತೆ ಬದಿಯಲ್ಲಿ ಆಟೋ ನಿಲ್ಲಿಸಲಾಗಿತ್ತು. ಓಡಿಬರುವ ಘೇಂಡಾಮೃಗ ಆಟೋದ ಒಳಗೆ ತಲೆ ಹಾಕಿದೆ. ಇದನ್ನು ನೋಡದ ಚಾಲಕ ಆಟೋ ರಿಕ್ಷಾದಿಂದ ಜಿಗಿದು ಎದ್ದೆನೊ ಬಿದ್ದೆನೋ ಎಂದು ಓಡಿ ಹೋಗುತ್ತಾನೆ. ಇದನ್ನು ನೋಡಿ ಹಲವರು ತಮಾಷೆ ಮಾಡಿದ್ದಾರೆ. ಬಹುಶಃ ಘೇಂಡಾಮೃಗ ಲಿಫ್ಟ್ ಕೇಳಲು ಬಂದಿರಬೇಕು ಎಂದಿದ್ದಾರೆ. ಆದರೆ ಸಾವನ್ನು ಹತ್ತಿರದಿಂದ ನೋಡಿದ ಆಟೋ ಚಾಲಕನ ಸ್ಥಿತಿ ಮಾತ್ರ ಯಾರಿಗೂ ಬೇಡ.
https://twitter.com/susantananda3/status/1630058203030405121?ref_src=twsrc%5Etfw%7Ctwcamp%5Etweetembed
https://twitter.com/Souradipta_/status/1630058946164826112?ref_src=twsrc%5Etfw%7Ctwcamp%5Etweetembed%7Ctwterm%5E1630058946164826112%7Ctwgr%5Eb98281140e5aa78e5635abbf9d787ccc523bd9ec%7Ctwcon%5Es1_&ref_url=https%3A%2F%2Fwww.news18.com%2Fbuzz%2Fjust-another-field-day-for-this-rhino-who-scared-auto-driver-away-7175461.html
https://twitter.com/Manjunaath/status/1630064222750011392?ref_src=twsrc%5Etfw%7Ctwcamp%5Etweetembed%7Ctwterm%5E1630064222750011392%7Ctwgr%5Eb98281140e5aa78e5635abbf9d787ccc523bd9ec%7Ctwcon%5Es1_&ref_url=https%3A%2F%2Fwww.news18.com%2Fbuzz%2Fjust-another-field-day-for-this-rhino-who-scared-auto-driver-away-7175461.html