ʼಜ್ಯುರಾಸಿಕ್ ಪಾರ್ಕ್ʼ ಕುರಿತು ಅತಿಯಾದ ಹುಚ್ಚು: ಡೈನಾಸಾರ್ ಬಟ್ಟೆ ಧರಿಸಿ ಮದುವೆಯಾದ ಜೋಡಿ….!

ಮದುವೆ ದಿನ ವಧು ಬಣ್ಣ ಬಣ್ಣದ ಲೆಹಂಗಾ ಹಾಗೂ ವರ ಕುರ್ತಾದಲ್ಲಿ ಕಾಣಿಸಿಕೊಳ್ಳೋದು ಸಹಜ. ಅಂತಹ ಬಟ್ಟೆಗಾಗಿಯೇ ಸಾವಿರಾರು ರೂಪಾಯಿ ದುಡ್ಡನ್ನ ಖರ್ಚು ಮಾಡಿರುತ್ತಾರೆ. ಆದರೆ ಇಲ್ಲೊಂದು ಜೋಡಿ ಇದೆ ನೋಡಿ. ಇವರು ತಮ್ಮ ಮದುವೆ ದಿನ ಉಟ್ಟ ಬಟ್ಟೆ ನೋಡಿ, ಮದುವೆಗೆ ಬಂದವರೆಲ್ಲ ಶಾಕ್ ಆಗಿ ಹೋಗಿದ್ದರು. ಬಿಕಾಸ್ ಈ ಜೋಡಿ ಡೈನಾಸಾರ್‌ ಅವತಾರದಲ್ಲಿ ಸತಿಪತಿಗಳಾಗಿದ್ದರು.

ಈ ಅಪರೂಪದ ಜೋಡಿ ಚೀನಾದವರಾಗಿದ್ದು, ವಧು ಜರಾಸಿಕ್ ಪಾರ್ಕ್ ಸಿನೆನಾ ಅಭಿಮಾನಿಯಾಗಿದ್ದರಿಂದ, ಆಕೆಗೆ ಡೈನಾಸಾರ್ ನಂತೆಯೇ ಬಟ್ಟೆ ಧರಿಸಿ ಮದುವೆ ಆಗಬೇಕು ಅನ್ನೊ ಕನಸಿತ್ತು. ಆಕೆ ತನ್ನ ಕನಸನ್ನ ವರನಿಗೆ ಹೇಳಿದಾಗ ಆತ ಕೂಡ ಅದನ್ನ ಖುಷಿಯಾಗಿ ಒಪ್ಪಿಕೊಂಡು, ತಾನು ಸಹ ಅದೇ ರೀತಿ ಬಟ್ಟೆ ಧರಿಸಿ ಆಕೆಯನ್ನ ಮದುವೆಯಾಗಿದ್ದಾನೆ.

ಚೀನಾದ ನ್ಯೂ ತೈಪೆ ಎಂಬ ನಗರದಲ್ಲಿ ಈ ವಿವಾಹ ನಡೆದಿದ್ದು, ಔಟೈಟ್ ಸೌತ್ ಚೀನಾ ಮಾರ್ನಿಂಗ್ ಅನ್ನೊ ಮಾಧ್ಯಮ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಮದುವೆ ವಿಡಿಯೋ, ಫೋಟೋಗಳು ಪೋಸ್ಟ್ ಮಾಡಿದ್ದು, ಈಗ ಇವುಗಳು ವೈರಲ್ ಆಗಿವೆ.

ಈ ಜೋಡಿ ಮದುವೆ ಆಗುವ ಮೊದಲು, ಡೈನಾಸಾರ್ ರೂಪದ ಬಟ್ಟೆಯನ್ನು ಧರಿಸಿಯೇ, ತಮ್ಮ ತಮ್ಮ ಹೆಸರು ಮತ್ತು ಮದುವೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು, ರಿಜಿಸ್ಟ್ರಾರ್ ಕಚೇರಿಗೆ ಕೊಟ್ಟಿದ್ದಾರೆ. ಈ ಜೋಡಿಯ ಗುರುತು ಹಿಡಿಯದ ಅಧಿಕಾರಿಗಳು ಕೊನೆಗೂ ಪತ್ತೆಗಾಗಿ, ಡೈನಾಸಾರ್ ಹುಡ್ ತೆಗೆದಾಗಲೇ ಇವರಿಗೆ ಗೊತ್ತಾಗಿದ್ದು, ಇವರು ಯಾರು ಅಂತ.

ಜೋಡಿಗಳು ಈ ರೀತಿ ಮದುವೆಯಾಗುವುದು ಅಪರೂಪದಲ್ಲೇ ಅಪರೂಪವಾಗಿದೆ. ಕೆಲವರ ಪ್ರಕಾರ ಇದು ವಿಚಿತ್ರ ಮದುವೆಯಾಗಿರಬಹುದು ಆದರೆ ಈ ರೀತಿಯ ಮದುವೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಕೆಲ ವರದಿಗಳ ಪ್ರಕಾರ 2021ರಲ್ಲೂ ಈ ರೀತಿಯ ವಿಚಿತ್ರ ಮದುವೆಯೊಂದು ನಡೆದಿತ್ತು. ನೆಟ್ಟಿಗರು ಈ ರೀತಿಯ ಮದುವೆಯನ್ನ ನೋಡಿ ಎಂಜಾಯ್ ಮಾಡುತ್ತಾರೆ. ಇನ್ನೂ ಕೆಲವರು ತಾವೂ ಕೂಡ ಇದೇ ರೀತಿ ಮದುವೆ ಆಗುವ ಕನಸನ್ನ ಬಯಕೆಯನ್ನ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಇವರಿಬ್ಬರಿಗೆ ಆದಷ್ಟು ಬೇಗ ಬೇಬಿ ಡೈನಾಸಾರ್ ಆಗಲಿ ಅಂತ ಕೂಡ ಹಾರೈಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read