ಬ್ರೆಜಿಲ್‌ನಲ್ಲಿ ನಡೆದ ಅತ್ಯಂತ ಆಘಾತಕಾರಿ ಘಟನೆಯೊಂದರಲ್ಲಿ, ನಾಪತ್ತೆಯಾಗಿದ್ದ 12 ವರ್ಷದ ಬಾಲಕಿಯ ಕುರಿತು ನೇರ ವರದಿ ಮಾಡುತ್ತಿದ್ದ ಪತ್ರಕರ್ತರೊಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದ ಆಕೆಯ ಶವದ ಮೇಲೆ ಕಾಲಿಟ್ಟಿದ್ದಾರೆ. ಈ ಬೆಚ್ಚಿಬೀಳಿಸುವ ಕ್ಷಣ ವಿಡಿಯೋದಲ್ಲಿ ಸೆರೆಯಾಗಿದೆ.
ನೇರ ಪ್ರಸಾರದಲ್ಲಿ ನಡೆದ ಅಘಾತಕಾರಿ ಘಟನೆ
ವರದಿಗಾರ ಲೆನಿಲ್ಡೋ ಫ್ರಜಾವೋ, ಬಕಾಬಾಲ್‌ನ ಮಿಯಾರಿಮ್ ನದಿಯಿಂದ ನೇರ ಪ್ರಸಾರ ಮಾಡುತ್ತಿದ್ದರು. ಸ್ನೇಹಿತರೊಂದಿಗೆ ಈಜಲು ಹೋಗಿ ನಾಪತ್ತೆಯಾಗಿದ್ದ 12 ವರ್ಷದ ರೈಸ್ಸಾ ಕುರಿತು ವರದಿ ಮಾಡುವಾಗ ಈ ಘಟನೆ ನಡೆದಿದೆ. ವರದಿ ಮಾಡುತ್ತಿದ್ದಾಗ, ತಮ್ಮ ಕೆಳಗಿನ ನೀರಿನಲ್ಲಿ ಏನೋ ಇರುವುದನ್ನು ಫ್ರಜಾವೋ ಗಮನಿಸಿದ್ದಾರೆ. ಹಿಂಜರಿದ ಅವರು, “ನನ್ನ ಪ್ರಕಾರ ಇಲ್ಲಿ ಕೆಳಗೆ ಏನೋ ಇದೆ” ಎಂದು ಹೇಳಿದ್ದಾರೆ. ನಡುಗಿದಂತೆ ಕಾಣುತ್ತಿದ್ದ ಅವರು, ಅದು ಹುಡುಗಿಯೇ ಅಥವಾ ಕೇವಲ ಮೀನು ಮಾತ್ರವೇ ಎಂದು ಖಚಿತಪಡಿಸಿಕೊಳ್ಳಲು “ನನಗೆ ಭಯವಾಗುತ್ತಿದೆ” ಎಂದು ಒಪ್ಪಿಕೊಂಡಿದ್ದಾರೆ.
ಶವ ಪತ್ತೆ ಮತ್ತು ತನಿಖೆ
ದುರದೃಷ್ಟವಶಾತ್, ರೈಸ್ಸಾ ನದಿಯಲ್ಲಿ ಈಜಲು ಹೋಗಿದ್ದಾಗ ಮುಳುಗಿ ಸಾವನ್ನಪ್ಪಿದ್ದಳು. ನೇರ ಪ್ರಸಾರದ ವರದಿಯ ನಂತರ, ಅಗ್ನಿಶಾಮಕ ದಳದವರು ಮತ್ತು ಡೈವರ್‌ಗಳು ವರದಿಗಾರ ಚಿತ್ರೀಕರಣ ಮಾಡುತ್ತಿದ್ದ ನಿಖರ ಸ್ಥಳದಲ್ಲೇ ರೈಸ್ಸಾ ಅವರ ಶವವನ್ನು ಪತ್ತೆ ಮಾಡಿದ್ದಾರೆ. ನಂತರ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ರೈಸ್ಸಾ ಅವರ ಸಾವು ಆಕಸ್ಮಿಕವಾಗಿ ಮುಳುಗಿದ ಕಾರಣದಿಂದಲೇ ಸಂಭವಿಸಿದೆ ಎಂದು ದೃಢಪಟ್ಟಿದೆ ಮತ್ತು ಯಾವುದೇ ರೀತಿಯ ಹಿಂಸಾಚಾರದ ಕುರುಹುಗಳು ಕಂಡುಬಂದಿಲ್ಲ.
Brazilian journalist discovers body of missing 12yo girl while filming report about her disappearance pic.twitter.com/73ygG2tGYh
— RT (@RT_com) July 21, 2025