‘ಕಾಟೇರ’ ಚಿತ್ರತಂಡಕ್ಕೆ ‘ಜೋಶ್’ ಸಾಥ್ : ‘ಪಸಂದಾಗವ್ನೆ’ ಹಾಡಿನ ಚಾಲೆಂಜ್ ಗೆ ಭರ್ಜರಿ ರೆಸ್ಪಾನ್ಸ್

ಭಾರತೀಯ ಮೂಲದ ಕಿರು ವೀಡಿಯೊ ಅಪ್ಲಿಕೇಶನ್ ಮೂಲಕ ಮನೆ ಮಾತಾದ ‘ಜೋಶ್’ ಜನರಿಗೆ ಉತ್ತಮ ಮನರಂಜನೆ ನೀಡುತ್ತಿದೆ.

ಇದರ ಜೊತೆಗೆ ‘ಜೋಶ್’ ನಟ ದರ್ಶನ್ ಅಭಿನಯದ ಕಾಟೇರ ಚಿತ್ರತಂಡದ ಪ್ರೊಮೋಷನ್ ಗೆ ಕೂಡ ಸಾಥ್ ನೀಡಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರದಲ್ಲಿ ನಟ ದರ್ಶನ್, ಜಗಪತಿ ಬಾಬು, ರಾಮ ರಂಜಾನ್ ಮತ್ತು ನಟಿ ಆರಾಧನಾ ರಾಮ್ ಸೇರಿದಂತೆ ಪ್ರಮುಖರು ಬಣ್ಣ ಹಚ್ಚಿದ್ದಾರೆ.

ವಿಶೇಷವಾಗಿ ಜೋಶ್ ಆಕರ್ಷಕ ‘ಪಸಂದಗಾವ್ನೆ’ ಆಡಿಯೋ ಚಾಲೆಂಜ್ ಪರಿಚಯಿಸುವ ಮೂಲಕ ಚಿತ್ರದ ಪ್ರೊಮೋಷನ್ ಗೆ ಸಾಥ್ ನೀಡಿದೆ. ಇದು ಬಳಕೆದಾರರಲ್ಲಿ ಭಾರಿ ಉತ್ಸಾಹವನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಚಾಲೆಂಜ್ ಸ್ವೀಕರಿಸಿದ ‘ಜೋಶ್’ ಅಭಿಮಾನಿಗಳು ಭಾರಿ ವೀಡಿಯೊಗಳನ್ನು ಮಾಡಿ ಅಪ್ ಲೋಡ್ ಮಾಡಿದ್ದಾರೆ.

‘ಪಸಂದಗಾವ್ನೆ’ ಆಡಿಯೋ ಚಾಲೆಂಜ್ ನಲ್ಲಿ ಉತ್ಸಾಹದಿಂದ ಹಲವರು ಭಾಗವಹಿಸಿದ್ದಾರೆ. ಈ ಮೂಲಕ ಕಾಟೇರಾ ಚಲನಚಿತ್ರದ ಪ್ರಚಾರವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.  ‘ಪಸಂದಾಗವ್ನೆ’ ಆಡಿಯೋ ಚಾಲೆಂಜ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು,  ‘ಪಸಂದಗಾವ್ನೆ’ ಆಡಿಯೋ ಚಾಲೆಂಜ್ ನಲ್ಲಿ ಭಾಗವಹಿಸಿದವರಿಗೆ ಆಶ್ಚರ್ಯಕರ ಉಡುಗೊರೆಗಳನ್ನು ಕೂಡ ಜೋಶ್ ತಂಡ  ನೀಡಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read