BREAKING : ‘ಜಾಲಿವುಡ್ ಸ್ಟುಡಿಯೋಸ್’ಗೆ 10 ದಿನ ಕಾಲಾವಕಾಶ ನೀಡಿದ ಡಿಸಿ : ಮತ್ತೆ ಬಿಗ್ ಬಾಸ್-12 ಆರಂಭ.!

ಬೆಂಗಳೂರು : ಬೆಂಗಳೂರು ಜಿಲ್ಲಾಧಿಕಾರಿಗಳು ಜಾಲಿವುಡ್ ಸ್ಟುಡಿಯೋಸ್’ಗೆ 10 ದಿನ ಕಾಲಾವಕಾಶ ನೀಡಿದ್ದಾರೆ ಎಂದು ಹೇಳಲಾಗಿದ್ದು, ಮತ್ತೆ ಬಿಗ್ ಬಾಸ್-12 ಶುರುವಾಗಲಿದೆ.

ಜಾಲಿವುಡ್ ಸ್ಟುಡಿಯೋ 15 ದಿನ ಅವಕಾಶ ಕೇಳಿದೆ, ಆದರೆ ನಾವು 10 ದಿನ ಕಾಲಾವಕಾಶ ನೀಡಿದ್ದೇವೆ. ತಪ್ಪುಗಳನ್ನ ಸರಿಪಡಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಆದ್ದರಿಂದ 10 ದಿನ ಕಾಲಾವಕಾಶ ನೀಡಿದ್ದೇವೆ ಎಂದು ಡಿಸಿ ಯಶವಂತ ವಿ ಗುರುಕರ್ ಕೇಳಿದ್ದಾರೆ.

10 ದಿನಗಳ ಕಾಲಾವಕಾಶ ಸಿಕ್ಕಿರುವ ಬೆನ್ನಲ್ಲೇ ಮತ್ತೆ ಬಿಗ್ ಬಾಸ್ ಶೋ ಆರಂಭವಾಗಲಿದೆ ಎಂದು ಹೇಳಲಾಗಿದೆ. ಸ್ಪರ್ಧಿಗಳು ವಾಪಸ್ ಬಂದರೆ ಯಾವುದೇ ಅಡೆತಡೆ ಇಲ್ಲದೇ ಎಪಿಸೋಡ್ ಗಳು ಪ್ರಸಾರವಾಗಲಿದೆ.
ಬಿಗ್ ಬಾಸ್ ಮನೆಗೆ ಬೀಗ ಹಾಕಿದ್ದನ್ನು ಪ್ರಶ್ನಿಸಿ ಜಾಲಿವುಡ್ ಸ್ಟುಡಿಯೋಸ್ ಹೈಕೋರ್ಟ್ ಮೊರೆ ಹೋಗಿದೆ. ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆ ಹಾಗೂ ಕಾರ್ಯಕ್ರಮ ನಡೆಸಲು ಪೊಲೀಸರ ಅನುಮತಿ ಪಡೆಯದೇ ಶೋ ಆರಂಭಿಸಿದ್ದಕ್ಕಾಗಿ ನೋಟಿಸ್ ನೀಡಿ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲಾಗಿದೆ. ತುರ್ತು ವಿಚಾರಣೆ ನಡೆಸುವಂತೆ ವಕೀಲರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು,ಜಾಲಿವುಡ್ ಸ್ಟುಡಿಯೋಸ್’ಗೆ 10 ದಿನ ಕಾಲಾವಕಾಶ : ಮತ್ತೆ ಬಿಗ್ ಬಾಸ್-12 ಆರಂಭರಿಟ್ ಅರ್ಜಿ ವಾಪಸ್ ಪಡೆಯುವ ಸಾಧ್ಯತೆಯಿದೆ.ಬಿಗ್ ಬಾಸ್ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋ ಸೀಜ್ ಆಗಿದ್ದು, ಈಗಲ್’ಟನ್ ರೆಸಾರ್ಟ್ ಗೆ 17 ಮಂದಿ ಸ್ಪರ್ಧಿಗಳು ಶಿಫ್ಟ್ ಆಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read