ಅಪಘಾತ ಮುಕ್ತ ಸಂಚಾರ ನಿರ್ಮಾಣಕ್ಕೆ ಪೊಲೀಸರ ಜೊತೆ ಕೈಜೋಡಿಸಿ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಸ್ತೆ ಅಪಘಾತ ಮುಕ್ತ ಸಂಚಾರ ನಿರ್ಮಾಣಕ್ಕೆ ಪೊಲೀಸರ ಜೊತೆ ಕೈಜೋಡಿಸಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ ‘ರಸ್ತೆ ಅಪಘಾತ ಮುಕ್ತ ಸಂಚಾರ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಂಚಾರ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ದ್ವಿಚಕ್ರ ವಾಹನ ಚಾಲನೆ ವೇಳೆ ಹೆಲ್ಮೆಟ್, ನಾಲ್ಕು ಚಕ್ರ ವಾಹನಗಳನ್ನು ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸಬೇಕು ಎಂಬುದು ಕೇವಲ ನಿಯಮಗಳಷ್ಟೇ ಅಲ್ಲ, ಅವುಗಳು ನಿಮ್ಮ ಜೀವವನ್ನು ಕಾಪಾಡುವ ಮುಂಜಾಗ್ರತಾ ಕ್ರಮಗಳು ಎಂಬ ಅರಿವಿರಬೇಕು’.

ಇಂತಹ ನಿಯಮಗಳನ್ನು ಪಾಲಿಸದೆ ತಮ್ಮ ಜೀವಕ್ಕಷ್ಟೇ ಅಲ್ಲ ಇತರ ಸಾರ್ವಜನಿಕರ ಜೀವಗಳಿಗೂ ಆಪತ್ತು ತಂದೊಡ್ಡುವವರು ಕಂಡುಬಂದರೆ ತಕ್ಷಣ ವಿವರಗಳನ್ನು ಟ್ವೀಟ್ ಮೂಲಕ ಬೆಂಗಳೂರು ಸಂಚಾರ ಪೊಲೀಸ್ (Bengaluru Traffic Police ) ಖಾತೆಗೆ ಟ್ಯಾಗ್ ಮಾಡಿ. ರಸ್ತೆ ಅಪಘಾತ ಮುಕ್ತ ಸಂಚಾರ ನಿರ್ಮಾಣಕ್ಕೆ ಪೊಲೀಸರ ಜೊತೆ ಕೈಜೋಡಿಸಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

TAGGED:
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read