’ಜಾಬ್‌ಲೆಸ್ ಜ್ಯೂಸ್‌ವಾಲಾ’: ವಿಶಿಷ್ಟ ಹೆಸರಿನಿಂದ ಗಿರಾಕಿಗಳನ್ನು ಸೆಳೆಯುತ್ತಿದೆ ಈ ಅಂಗಡಿ

ಬೇಸಿಗೆ ಮಾಸಕ್ಕೆ ಕಾಲಿಡುತ್ತಿದ್ದಂತೆಯೇ ದಿನೇ ದಿನೇ ತಾಪಮಾನದಲ್ಲಿ ಭಾರೀ ಏರಿಕೆಯಾಗುತ್ತಿದೆ. ರೈಲ್ವೇ ನಿಲ್ಧಾಣ, ಬಸ್ ನಿಲ್ದಾಣ ಹಾಗೂ ರಸ್ತೆ ಬದಿಗಳು ಸೇರಿದಂತೆ ಎಲ್ಲೆಲ್ಲೂ ಜ್ಯೂಸ್ ಅಂಗಡಿಗಳತ್ತ ಜನರು ಸಾಲುಗಟ್ಟಿ ನಿಲ್ಲುವುದು ಸರ್ವೇ ಸಾಮಾನ್ಯವಾಗಿದೆ.

ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಬುರ್ದ್ವಾನ್‌ ನಗರದಲ್ಲಿ ’ಜಾಬ್‌ಲೆಸ್ ಜ್ಯೂಸ್‌ವಾಲಾ’ ಹೆಸರಿನ ಜ್ಯೂಸ್ ಅಂಗಡಿಯೊಂದು ಭಾರೀ ಸದ್ದು ಮಾಡುತ್ತಿದೆ.

ತನ್ನ ಹೆಸರಿನಿಂದಲೇ ಸ್ಥಳಿಯರು ಹಾಗೂ ಹೊರಗಿನ ಮಂದಿಯನ್ನು ಸೆಳೆಯುತ್ತಿರುವ ಈ ಅಂಗಡಿಯಲ್ಲಿ ಮೋಜಿಟೋಗಳು, ಮಸಾಲಾ ಸೋಡಾಗಳು ಹಾಗೂ ಮಾವಿನ ಹಣ್ಣಿನ ಜ್ಯೂಸ್ ಸಿಗುತ್ತಿದೆ. 30-40 ರೂ.ಗಳ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಜ್ಯೂಸ್‌ಗಳೂ ಇಲ್ಲಿ ಸಿಗುತ್ತವೆ.

ಅಂಗಡಿಯ ಹೆಸರನ್ನು ಹೀಗೇಕೆ ಇಡಲಾಗಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಮಾಲೀಕ ಅಭಿಜಿತ್‌ ಗುಹಾ ಹಾಗೂ ಅಪು ಸರ್ಕಾರ್‌, ತಾವು ಬಾಲ್ಯದಿಂದಲೂ ಸ್ನೇಹಿತರಾಗಿದ್ದು, ಅನೇಕ ಖಾಸಗಿ ಸಂಸ್ಥೆಗಳಲ್ಲಿ ಜೊತೆಯಾಗಿ ಕೆಲಸ ಮಾಡಿರುವುದಾಗಿ ತಿಳಿಸಿದ್ದಾರೆ. 14 ವರ್ಷಗಳ ಕಾಲ ಕೆಲಸ ಮಾಡಿ ಇತ್ತೀಚೆಗೆ ತಮ್ಮ ಕೆಲಸ ಕಳೆದುಕೊಂಡ ಬಳಿಕ, ತಮ್ಮ ಪ್ರಸಕ್ತ ಉದ್ಯೋಗದ ಸ್ಥಿತಿಯನ್ನೇ ತಮ್ಮ ಅಂಗಡಿಗೆ ಹೆಸರನ್ನಾಗಿಟ್ಟು, ’ಜಾಬ್‌ಲೆಸ್ ಜ್ಯೂಸ್‌ವಾಲಾ’ ಎಂಬ ಹೆಸರಿನಲ್ಲಿ ಹೊಸ ಬ್ಯುಸಿನೆಸ್ ಆರಂಭಿಸಿಕೊಂಡಿದ್ದಾರೆ ಈ ಜೋಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read