ಚಿಕ್ಕಮಗಳೂರು : ಉದ್ಯೋಗಾಂಕ್ಷಿಗಳೇ ಎಚ್ಚರ..! ವರ್ಕ್ ಫ್ರಂ ಹೋಂ ಜಾಹೀರಾತು ನಂಬಿ ಕೆಲಸಕ್ಕೆ ಅರ್ಜಿ ಹಾಕುವ ಮುನ್ನ ಹುಷಾರಾಗಿರಬೇಕು..!
ಹೌದು. ವರ್ಕ್ ಫ್ರಮ್ ಹೋಂ ಜಾಹೀರಾತು ನಂಬಿದ ಮಹಿಳೆಯೋರ್ವರು 2.5 ಲಕ್ಷ ರೂ ಕಳೆದುಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಮಹಿಳೆಯೋರ್ವರಿಗೆ ಕಿಡಿಗೇಡಿ ವರ್ಕ್ ಫ್ರಮ್ ಹೋಂ ಜಾಹೀರಾತು ಲಿಂಕ್ ಕಳುಹಿಸಿದ್ದಾನೆ. ಕೆಲಸ ಮಾಡಲು ಇಷ್ಟವಿದ್ದರೆ ಈ ಲಿಂಕ್ ಕ್ಲಿಕ್ ಮಾಡಿ ಎಂದಿದ್ದಾನೆ. ಇದನ್ನು ನಂಬಿದ ಮಹಿಳೆ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದ್ದಾರೆ. ನಂತರ ದುಷ್ಕರ್ಮಿಗಳು ಹೇಳಿದಂತೆ ಮಾಡಿದ್ದಾರೆ. ಮೊದಲಿಗೆ 1300 ರೂ ಹಣ ನೀಡಿದ ವಂಚಕರು ಇಷ್ಟು ಹಣ ಹಾಕಿದ್ರೆ ದುಪ್ಪಟ್ಟು ಹಣ ನೀಡುತ್ತೇವೆ ಎಂದು ಒಟ್ಟು 2,57,600 ರೂ ಹಣ ಹಾಕಿಸಿಕೊಂಡಿದ್ದಾರೆ. ಹಣ ಬಂದ ನಂತರ ಸಂಪರ್ಕ ಕಳೆದುಕೊಂಡಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.