ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು : ಜಿಲ್ಲಾ ಅಂಗವಿಕಲರ ಪುನರ್ವಸತಿ  ಕೇಂದ್ರಕ್ಕೆ  ಗೌರವ ಧನದ ಆಧಾರದ ಮೇಲೆ  ಸಂರ್ದಶನದ ಮೂಲಕ ವಿವಿಧ ಹುದ್ದೆಗಳಾದ ಫಿಜಿಯೋಥೆರಪಿಸ್ಟ್, ಆಕ್ಯುಪೇಶನಲ್ ಥೆರಪಿಸ್ಟ್ ಪೂರ್ಣಾವಧಿ, ಲೆದರ್ ವರ್ಕರ್, ಶೂ ಮೇಕರ್, ಸ್ವೀಚ್ ಥೆರಪಿಸ್ಟ್ ಮತ್ತು ಆಡಿಯಾಲಿಜಿಸ್ಟ್, ಮೊಬಿಲಿಟಿ ಇನ್ಸ್ ಟ್ರಕ್ಟರ್, ಇಯರ್ ಮೊಲ್ಡ್ ಟೆಕ್ನಿಷಿಯನ್, ಕೀಲು ಮತ್ತು ಮೂಳೆ ತಜ್ಞರು, ಆಪ್ತಾಲ್ಮೋಲಜಿಸ್ಟ್, ಇ.ಎನ್.ಟಿ ಸ್ಪೇಚಲಿಸ್ಟ್ ಮತ್ತು ಸೈಕಿಯಾಟ್ರಿಸ್ಟ್  ಹುದ್ದೆಗಳಿಗೆ 18 ರಿಂದ 45 ವರ್ಷಗಳ ವಯೋಮಿತಿಯಲ್ಲಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಗತ್ಯ ದಾಖಲೆಗಳೊಂದಿಗೆ  ಅರ್ಜಿಗಳನ್ನು ಅಧ್ಯಕ್ಷರು / ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ರವಿ ಕಿರ್ಲೋಸ್ಕರ್ ಆಸ್ಪತ್ರೆ ಆವರಣ, ಪೀಣ್ಯ, 1 ಹಂತ, ಬೆಂಗಳೂರು -560058 ಇಲ್ಲಿ ಖುದ್ದಾಗಿ ಅಥವಾ ಅಂಚೆ ಮೂಲಕ ಜುಲೈ 25 ಸಂಜೆ 5 ಗಂಟೆ ರೊಳಗೆ  ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ  ದೂರವಾಣಿ ಸಂಖ್ಯೆ: 804179472, 8431308600, 9164496483 ಗೆ ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read