ಉದ್ಯೋಗ ವಾರ್ತೆ : ‘ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗ’ದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ |SSC recruitment 2025

ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು Lower division cleark (LDC), junior secretariat assistant (JSA), Data entry operator (DEO) ಮತ್ತು Data entry operator Grade ‘A’ ಹುದ್ದೆಗಳ ನೇಮಕಾತಿಗಾಗಿ ಮುಕ್ತ ಸ್ಪರ್ಧಾತ್ಮಕ ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 18 ಅರ್ಜಿ ಸಲ್ಲಿಸಲು ಕೊನೆಯ ದಿನ.

ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ ಪರೀಕ್ಷೆಯಲ್ಲಿ ಪಿ.ಯು.ಸಿ ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳ ವಯೋಮಿತಿ 18 ರಿಂದ 27 ವರ್ಷದೊಳಗಿರಬೇಕು. ಎಸ್.ಸಿ/ಎಸ್.ಟಿ/ಒ.ಬಿ.ಸಿ/ಇ.ಎಸ್.ಎಮ್ ಇತರ ನಿರ್ದಿಷ್ಟ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಪರೀಕ್ಷೆಯ ಸಂಭವನೀಯ ದಿನಾಂಕ ಸೆಪ್ಟೆಂಬರ್-2025 ಆಗಿದ್ದು, ನಿಖರ ದಿನಾಂಕವನ್ನು ಎಸ್‍ಎಸ್‍ಸಿ ವೆಬ್‍ಸೈಟ್ ಮೂಲಕ ತಿಳಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಎಸ್‍ಎಸ್‍ಸಿ ವೆಬ್‍ಸೈಟ್ www.ssckkr.kar.nic.in/https://ssc.nic.in ಗೆ ಭೇಟಿ ನೀಡಬಹುದು ಹಾಗೂ ಸಿಬ್ಬಂದಿ ನೇಮಕಾತಿ ಆಯೋಗದ ದೂರವಾಣಿ ಸಂಖ್ಯೆ 080-25502520 ಅಥವಾ ಚಿತ್ರದುರ್ಗ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದೂರವಾಣಿ ಸಂಖ್ಯೆ 9945587060, 7022459064 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read