ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಶಿಮುಲ್) ಶಿವಮೊಗ್ಗ ವತಿಯಿಂದ ಖಾಲಿ ಇರುವ ವಿವಿಧ ವೃಂದಗಳಲ್ಲಿನ ಒಟ್ಟು 194 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಸರ್ಕಾರದ ಆದೇಶದಂತೆ ನೇಮಕಾತಿಗೆ ಸಂಬಂಧಿಸಿದ ವಿವರವಾದ ಮಾಹಿತಿಗಳಾದ ಮೀಸಲಾತಿ ವರ್ಗೀಕರಣ, ಒಳ ಮೀಸಲಾತಿ, ವಿದ್ಯಾರ್ಹತೆ, ಅನುಭವ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ, ಅರ್ಜಿ ನಮೂನೆ, ಸಲ್ಲಿಸಬೇಕಾದ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ ಮೊದಲಾದ ಎಲ್ಲಾ ವಿವರಗಳನ್ನು ಅಧಿಕೃತ ವೆಬ್ಸೈಟ್ www.shimul.coop ನಲ್ಲಿ ನೀಡಲಾಗಿದೆ,
ಸಹಾಯಕ ವ್ಯವಸ್ಥಾಪಕರು 17 ಹುದ್ದೆ, ತಾಂತ್ರಿಕ ಅಧಿಕಾರಿ 14 ಹುದ್ದೆ, ವಿಸ್ತರಣಾ ಅಧಿಕಾರಿ ದರ್ಜೆ 3ರ 17 ಹುದ್ದೆ, ಆಡಳಿತ ಸಹಾಯಕ ದರ್ಜೆ 2ರ 17 ಹುದ್ದೆ, ಕೆಮಿಸ್ಟ್ ದರ್ಜೆ 2ರ 28 ಹುದ್ದೆಗಳು, ಕಿರಿಯ ತಾಂತ್ರಿಕರು 50 ಹುದ್ದೆಗಳು ಸೇರಿದಂತೆ 194 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ನವೆಂಬರ್ 14 ರಿಂದ ಡಿಸೆಂಬರ್ 14ರ ವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ವೆಬ್ಸೈಟ್ ಗಮನಿಸಬಹುದು. ನಿಗದಿತ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸತಕ್ಕದ್ದು. ಈ ನೇಮಕಾತಿಗಾಗಿ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಖುದ್ದಾಗಿ, ಅಂಚೆ ಅಥವಾ ಕೋರಿಯರ್ ಮೂಲಕ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ಶಿಮುಲ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

