JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ಜೂನ್ 15 ರಂದು ಬೆಂಗಳೂರಿನಲ್ಲಿ ‘ಉದ್ಯೋಗ ಮೇಳ’ ಆಯೋಜನೆ

ಶಿವಮೊಗ್ಗ : ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಇವರ ಸಹಯೋಗದಲ್ಲಿ ಜೂನ್ 15 ರಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕೌಶಲ್ಯ ಮಿಷನ್, ಕೌಶಲ್ಯ ಭವನ, ಬನ್ನೇರುಘಟ್ಟ ರಸ್ತೆ, ಡೈರಿ ವೃತ್ತ, ಬೆಂಗಳೂರು-29 ಇಲ್ಲಿ ಉದ್ಯೋಗ ಮೇಳವನ್ನು( Job  Fair)  ಆಯೋಜಿಸಿದೆ.

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ಗಳಲ್ಲಿ ಸ್ವೀವರ್ಡ್, ಕ್ಯಾಪ್ಟನ್, ಅಡುಗೆ ಸಹಾಯಕ, ಮಾಣಿ, ಮೇಲ್ವಿಚಾರಕ, ಬಾಣಸಿಗ ಹಾಗೂ ಇತರೆ ಕೆಲಸಗಾರರ ವಿಭಾಗಗಳಲ್ಲಿ ಕೆಲಸ ನಿರ್ವಹಿಸಲು ಉದ್ಯೋಗಾವಕಾಶವಿದೆ.

ಆಸಕ್ತರು, ನಿಗಮದ ಜಾಲತಾಣ https://tinyurl.com/ksdcjobdrive ರಲ್ಲಿ ನೋಂದಾಯಿಸಿಕೊಂಡು ಅಥವಾ ಜೂನ್ 15 ರಂದು ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಮೇಳದಲ್ಲಿ ಭಾಗವಹಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಹೆಚ್.ಎಂ.ಸುರೇಶ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9019485688/ ದೂ.ಸಂ.: 08182-255294 ಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read