JOB FAIR : ಜೂ.22 ರಂದು ಬೆಂಗಳೂರಿನಲ್ಲಿ ದೈಹಿಕ ಅಂಗವಿಕಲರ ಉದ್ಯೋಗ ಮೇಳ ಆಯೋಜನೆ

ಬೆಂಗಳೂರು : ಬೆಂಗಳೂರಿನ ದೈಹಿಕ ಅಂಗವಿಕಲರ ಸಂಸ್ಥೆಯು ವಿಕಲಚೇತನ ವ್ಯಕ್ತಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಚೇಂಬರ್ ಆಪ್ ಇಂಡಸ್ಟ್ರಿ ಆಂಡ್ ಕಾಮರ್ಸ್ (ಬಿಸಿಐಸಿ) ಮತ್ತು ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಜೂನ್ 22 ಬೆಳಗ್ಗೆ 9.00 ರಿಂದ ಮಧ್ಯಾಹ್ನ 3.00 ರವರೆಗೆ ಮಹಾರಾಣಿ ಅಮ್ಮಣ್ಣಿ ಲಕ್ಷ್ಮೀ ಕಾಲೇಜ್ ಆವರಣ ಮಲ್ಲೇಶ್ವರಂ, 18ನೇ ಅಡ್ಡ ರಸ್ತೆ ಬೆಂಗಳೂರಿನಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.

ಈ ಉದ್ಯೋಗಮೇಳದಲ್ಲಿ ಜಿಲ್ಲೆಯ ಆಸಕ್ತ ವಿಕಲಚೇತನ ಆಭ್ಯರ್ಥಿಗಳು ಭಾಗವಹಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182 295234/ 251676 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read