JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ‘BBMP’ ಯಲ್ಲಿ 444 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು : ಬಿಬಿಎಂಪಿ ( ಬೃಹತ್ ಮಹಾನಗರ ಪಾಲಿಕೆ) 444 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ (ಎನ್ ಯುಎಚ್ಎಂ), ಆರ್ಸಿಎಚ್, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ (ಎನ್ಟಿಇಪಿ), ರಾಷ್ಟ್ರೀಯ ಮಾನಸಿಕ ಆರೋ ಗ್ಯ ಕಾರ್ಯಕ್ರಮ ತಂಬಾಕು ನಿಯಂತ್ರಣ ಕಾರ್ಯಕ್ರಮ, ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಹಾಗೂ ಅಂಧತ್ವ ನಿರ್ಮೂಲನಾ ಕಾರ್ಯಕ್ರಮದಡಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಮೆರಿಟ್ ಕಂ ರೋಸ್ಟರ್ ಆಧಾರದಲ್ಲಿ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.ಫೆ.13, 14 ಮತ್ತು 15 ರಂದು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ನೇಮಕಾತಿ ನಡೆಯಲಿದೆ.

48 ಫಾರ್ಮಾಸಿಸ್ಟ್, 5 ಲ್ಯಾಬ್ ತಂತ್ರಜ್ಞ, ಸಾಂಕ್ರಾಮಿಕ ಶಾಸ್ತ್ರಜ್ಞ ಒಂದು ಹುದ್ದೆ, 154 ಪಿಎಚ್ಸಿಒ, 115 ಎಚ್ಐಒ, 40 ಸ್ಟಾಫ್ ನರ್ಸ್, ಬಯೋ ಮೆಡಿಕಲ್ ಎಂಜಿನಿಯರ್ ಒಂದು ಹುದ್ದೆ, ವಲಯ ಕಾರ್ಯಕ್ರಮ ವ್ಯವಸ್ಥಾಪಕ 2 ಹುದ್ದೆ, 4 ಒಬಿಜಿ, ನೇತ್ರ ತಜ್ಞರು, ಮಕ್ಕಳ ತಜ್ಞರು ಹೀಗೆ ವಿವಿಧ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read