JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ‘BHEL’ ನಲ್ಲಿ 600ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ (ಬಿಎಚ್ಇಎಲ್) ನಲ್ಲಿ ಅಪ್ರೆಂಟಿಸ್ಶಿಪ್ ಮಾಡಲು ಅವಕಾಶವಿದೆ. ಬಿಎಚ್ಇಎಲ್ ಟ್ರೇಡ್ ಅಪ್ರೆಂಟಿಸ್ಶಿಪ್, ಟೆಕ್ನಿಷಿಯನ್ ಅಪ್ರೆಂಟಿಸ್ ಮತ್ತು ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅಧಿಸೂಚನೆಯ ಪ್ರಕಾರ, ಬಿಎಚ್ಇಎಲ್ ನಲ್ಲಿ ಒಟ್ಟು 680 ಅಪ್ರೆಂಟಿಸ್ಶಿಪ್ ಹುದ್ದೆಗಳು ಖಾಲಿ ಇವೆ.

ಅರ್ಜಿ ಸಲ್ಲಿಸಲು ಡಿಸೆಂಬರ್ 1 ಕೊನೆಯ ದಿನವಾಗಿದೆ. ಅಪ್ರೆಂಟಿಸ್ಶಿಪ್ ಬಯಸುವ ಅಭ್ಯರ್ಥಿಗಳು trichy.bhel.com ಬಿಎಚ್ಇಎಲ್ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು. ಬಿಎಚ್ಇಎಲ್ನಲ್ಲಿ ಟೆಕ್ನಿಷಿಯನ್ ಮತ್ತು ಗ್ರಾಜುಯೇಟ್ ಅಪ್ರೆಂಟಿಸ್ಶಿಪ್ ಒಂದು ವರ್ಷದವರೆಗೆ ಇರುತ್ತದೆ. ಅಪ್ರೆಂಟಿಸ್ಶಿಪ್ ಸಮಯದಲ್ಲಿ ಪ್ರತಿ ತಿಂಗಳು ಸ್ಟೈಫಂಡ್ ಸಹ ಲಭ್ಯವಿರುತ್ತದೆ.

ವಯಸ್ಸಿನ ಮಿತಿ

ಬಿಎಚ್ಇಎಲ್ನಲ್ಲಿ ಅಪ್ರೆಂಟಿಸ್ಶಿಪ್ಗೆ ಕನಿಷ್ಠ ವಯಸ್ಸಿನ ಮಿತಿ 17 ವರ್ಷಗಳು ಮತ್ತು ಗರಿಷ್ಠ 27 ವರ್ಷಗಳು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ಬಿಎಚ್ಇಎಲ್ ತಿರುಚ್ಚಿ 680 ಅಪ್ರೆಂಟಿಸ್ಶಿಪ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಟ್ರೇಡ್ ವಾರು ಖಾಲಿ ಹುದ್ದೆಗಳ ವಿವರಗಳು ಈ ಕೆಳಗಿನಂತಿವೆ-

ಗ್ರ್ಯಾಜುಯೇಟ್ ಅಪ್ರೆಂಟಿಸ್ 179 ಹುದ್ದೆಗಳು
ಟೆಕ್ನಿಷಿಯನ್ ಅಪ್ರೆಂಟಿಸ್ 103 ಹುದ್ದೆಗಳು
ಟ್ರೇಡ್ ಅಪ್ರೆಂಟಿಸ್ 398 ಹುದ್ದೆಗಳು

 ಸ್ಟೈಫಂಡ್

ಗ್ರ್ಯಾಜುಯೇಟ್ ಅಪ್ರೆಂಟಿಸ್ ಹುದ್ದೆಗೆ ಆಯ್ಕೆಯಾದರೆ, ನೀವು ತಿಂಗಳಿಗೆ 9000 ರೂ.ಗಳ ಸ್ಟೈಫಂಡ್ ಪಡೆಯುತ್ತೀರಿ.
ಟೆಕ್ನಿಷಿಯನ್ ಅಪ್ರೆಂಟಿಸ್ ಗಳಿಗೆ ತಿಂಗಳಿಗೆ 8000 ರೂ.ಗಳ ಸ್ಟೈಫಂಡ್ ನೀಡಲಾಗುವುದು.
ಟ್ರೇಡ್ ಅಪ್ರೆಂಟಿಸ್ ಗಳಿಗೆ ತಿಂಗಳಿಗೆ 7700 ರಿಂದ 8,050 ರೂ.ವರೆಗೆ ಸ್ಟೈಫಂಡ್ ನೀಡಲಾಗುವುದು.

ಅಗತ್ಯವಿರುವ ಶೈಕ್ಷಣಿಕ ಅರ್ಹತೆ

ನಾನ್ ಟೆಕ್ನಿಕಲ್ ಗ್ರಾಜುಯೇಟ್ ಅಪ್ರೆಂಟಿಸ್ಶಿಪ್ – ಅಕೌಂಟೆಂಟ್ ಅಪ್ರೆಂಟಿಸ್ಶಿಪ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಾಣಿಜ್ಯದಲ್ಲಿ ಪದವಿ ಪಡೆದಿರಬೇಕು. ಅಸಿಸ್ಟೆಂಟ್ ಎಚ್ಆರ್ ಹುದ್ದೆಗೆ ಬಿಎ ವಿದ್ಯಾರ್ಹತೆ ಇರಬೇಕು.
ಟೆಕ್ನಿಕಲ್ ಗ್ರಾಜುಯೇಟ್ ಅಪ್ರೆಂಟಿಸ್ಶಿಪ್- ಇಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ ಪದವಿ.
ಟೆಕ್ನಿಷಿಯನ್ ಅಪ್ರೆಂಟಿಸ್- ಸಂಬಂಧಪಟ್ಟ ಎಂಜಿನಿಯರಿಂಗ್ ಶಾಖೆಯಲ್ಲಿ ಡಿಪ್ಲೊಮಾ.
ಟ್ರೇಡ್ ಅಪ್ರೆಂಟಿಸ್ಶಿಪ್: ಅಭ್ಯರ್ಥಿಗಳು ಆಯಾ ಟ್ರೇಡ್ನಲ್ಲಿ ಐಟಿಐ ಮಾಡಿರಬೇಕು.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read