JOB ALERT : ಯುವ ಸಮಾಲೋಚಕರು, ಯುವ ಪರಿವರ್ತಕರ ತರಬೇತಿಗೆ ನೇರ ಸಂದರ್ಶನ : ಅರ್ಜಿ ಆಹ್ವಾನ

ಬಳ್ಳಾರಿ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ “ಯುವ ಸ್ಪಂದನ” ಕಾರ್ಯಕ್ರಮದಡಿಯಲ್ಲಿ ಹೊಸದಾಗಿ ಯುವ ಸಮಾಲೋಚಕರು ಹಾಗೂ ಯುವ ಪರಿವರ್ತಕರ ತರಬೇತಿಗೆ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಗ್ರೇಸಿ ಅವರು ತಿಳಿಸಿದ್ದಾರೆ.

ಯುವಜನತೆಗೆ ಸಂಬಂಧಿಸಿದ ವಿಷಯಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್) ಬೆಂಗಳೂರು ಇಲ್ಲಿ ತರಬೇತಿ ಪಡೆಯಲಿದ್ದು, ಅಲ್ಲಿ ಆಯ್ಕೆಯಾದ ನಂತರ ಯುವ ಪರಿವರ್ತಕ ಯುವ ಸಮಾಲೋಚಕರೆಂದು ಪ್ರಮಾಣೀಕರಿಸಲಾಗುತ್ತದೆ.

*ಯುವ ಪರಿವರ್ತಕರು

ಬಳ್ಳಾರಿ, ಕಂಪ್ಲಿ, ಸಿರುಗುಪ್ಪ, ಸಂಡೂರು, ಕುರುಗೋಡು ತಾಲ್ಲೂಕಿನಲ್ಲಿ 06 ಯುವ ಪರಿವರ್ತಕರ ಹುದ್ದೆ ಖಾಲಿಯಿರುತ್ತವೆ.

*ಶೈಕ್ಷಣಿಕ ಅರ್ಹತೆ

ಪದವಿ ಹಾಗೂ ಮೇಲ್ಪಟ್ಟು (Psychology/Social work) ಪದವಿ ತೇರ್ಗಡೆ ಹೊಂದಿರಬೇಕು. ಸಮುದಾಯದಲ್ಲಿ ಕೆಲಸ ಮಾಡಿ ಅನುಭವ ಇರುವವರಿಗೆ ಆದ್ಯತೆ. ಸಾರ್ವಜನಿಕರ ಮಾನಸಿಕ ಆರೋಗ್ಯ ಸಂವರ್ಧನ ಸೇವೆಗಳ ಬಗ್ಗೆ ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಹುಮ್ಮಸ್ಸು ಹೊಂದಿರಬೇಕು. ಕನ್ನಡವನ್ನು ಸ್ವಚ್ಚವಾಗಿ ಮಾತನಾಡಬೇಕು. ಪರಸ್ಪರ ಭಾಂದವ್ಯಾಭಿವೃದ್ಧಿಯ ಕೌಶಲ್ಯ, ತರಬೇತಿ ನೀಡುವ ಕೌಶಲ್ಯ, ಸಂವಹನ ಮತ್ತು ಉಲ್ಲೇಖ ಸೇವೆಗಳಿಗೆ ಸಂಘ ಸಂಸ್ಥೆಗಳ ಜೊತೆ ಸಹಯೋಗ ಏರ್ಪಡಿಸುವ ಕೌಶಲ್ಯಗಳು ಇರಬೇಕು. ವಯೋಮಿತಿ 21 ರಿಂದ 35 ವರ್ಷ ಹೊಂದಿರಬೇಕು. ಗೌರವಧನ ಮತ್ತು ಅವಧಿ ಪ್ರಮಾಣಿಕೃತ ಅಭ್ಯರ್ಥಿಗಳಿಗೆ ತಿಂಗಳಿಗೆ ಗೌರವಧನ ಹಾಗೂ ಪ್ರವಾಸ ಭತ್ಯೆ ಆರು ತಿಂಗಳ ಕಾಲ ನೀಡಲಾಗುವುದು.

*ಯುವಸಮಾಲೋಚಕ

ಬಳ್ಳಾರಿ ಜಿಲ್ಲೆಗೆ ಖಾಲಿಯಿರುವ 01 ಹುದ್ದೆಗೆ ಯುವ ಪರಿವರ್ತಕರನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು.

*ಶೈಕ್ಷಣಿಕ ಅರ್ಹತೆ:

ಪದವಿ ಹಾಗೂ ಎಂಎಸ್‍ಡಬ್ಲ್ಯೂ (Psychology/Social work) ಪದವಿ ತೇರ್ಗಡೆ ಹೊಂದಿರಬೇಕು. ಸಮುದಾಯದಲ್ಲಿ ಕೆಲಸ ಮಾಡಿ ಅನುಭವ ಇರುವವರಿಗೆ ಆದ್ಯತೆ. ಆಪ್ತ ಸಮಾಲೋಚನೆಯನ್ನು ಒದಗಿಸುವ ಕೌಶಲ್ಯವನ್ನು ಹೊಂದಿರಬೇಕು. ಸಾರ್ವಜನಿಕರ ಮಾನಸಿಕ ಆರೋಗ್ಯ ಸಂವರ್ಧನ ಸೇವೆಗಳ ಬಗ್ಗೆ ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಹುಮ್ಮಸ್ಸು ಹೊಂದಿರಬೇಕು. ಕನ್ನಡವನ್ನು ಸ್ವಚ್ಚವಾಗಿ ಮಾತನಾಡುವುದು ಅವಶ್ಯಕ. ಪರಸ್ಪರ ಭಾಂದವ್ಯಾಭಿವೃದ್ಧಿಯ ಕೌಶಲ್ಯ, ತರಬೇತಿ ನೀಡುವ ಕೌಶಲ್ಯ, ಸಂವಹನ ಮತ್ತು ಉಲ್ಲೇಖ ಸೇವೆಗಳಿಗೆ ಸಂಘ ಸಂಸ್ಥೆಗಳ ಜೊತೆ ಸಹಯೋಗ ಏರ್ಪಡಿಸುವ ಕೌಶಲ್ಯಗಳು ಇರಬೇಕು. ವಯೋಮಿತಿ 21 ರಿಂದ 35 ವರ್ಷ. ಗೌರವಧನ ಮತ್ತು ಅವಧಿ ಪ್ರಮಾsಣೀಕೃತ ಅಭ್ಯರ್ಥಿಗಳಿಗೆ ತಿಂಗಳಿಗೆ ಗೌರವಧನ ಹಾಗು ಪ್ರವಾಸ ಭತ್ಯೆ ಆರು ತಿಂಗಳ ಕಾಲ ನೀಡಲಾಗುವುದು.

ಅರ್ಜಿ ಸಲ್ಲಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿಳಾಸ, ವಯಸ್ಸು, ವಾಸಿಸುತ್ತಿರುವ ವಿಳಾಸ, ವೈಯಕ್ತಿಕ ಮಾಹಿತಿಯೊಂದಿಗೆ ಜ.13 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ಯುವ ಸ್ಪಂದನ ಕೇಂದ್ರ ಬಿಡಿಎಎ ಫುಟ್‍ಬಾಲ್ ಮೈದಾನ ಮತ್ತು ಜಿಲ್ಲಾ ಕ್ರೀಡಾಂಗಣ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಗ್ರೇಸಿ ಅವರು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read