JOB ALERT : ಗೃಹರಕ್ಷಕ ಸ್ವಯಂ ಸೇವಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬಳ್ಳಾರಿ : ಜಿಲ್ಲೆಯ ಸಂಡೂರು, ಸಿರುಗುಪ್ಪ, ಕುರುಗೋಡು, ಕುಡುತಿನಿ, ತೆಕ್ಕಲಕೋಟೆ, ಮತ್ತು ತೋರಣಗಲ್ಲು ಘಟಕಗಳಲ್ಲಿ ಖಾಲಿ ಇರುವ ಗೃಹರಕ್ಷಕರ ಸ್ವಯಂಸೇವಕ ಸ್ಥಾನಗಳನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಏ.17 ರಿಂದ 29 ರ ವರೆಗೆ ಬೆಳಿಗ್ಗೆ 09 ಗಂಟೆಯಿAದ 12 ಗಂಟೆಯವರೆಗೆ ಮಾತ್ರ ನೀಡಲಾಗುವುದು (ರಜಾ ದಿನಗಳನ್ನು ಹೊರತು ಪಡಿಸಿ). ಅರ್ಜಿಗಳನ್ನು ಉಚಿತವಾಗಿ ನೀಡಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಏ.29 ರ ಮಧ್ಯಾಹ್ನ 01 ಗಂಟೆ ಒಳಗೆ ಖುದ್ದಾಗಿ ಕಚೇರಿಗೆ ಸಲ್ಲಿಸಬಹುದು.

ವಿದ್ಯಾರ್ಹತೆಯು ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯ ವಯಸ್ಸು 19 ವರ್ಷಗಳು ತುಂಬಿರಬೇಕು ಹಾಗೂ 40 ವರ್ಷಗಳು ಮೀರಿರಬಾರದು. ಸಂಡೂರು, ಕುಡುತಿನಿ, ತೆಕ್ಕಲಕೋಟೆ, ತೋರಣಗಲ್ಲು, ಕುರುಗೋಡು ಮತ್ತು ಸಿರುಗುಪ್ಪ ಘಟಕಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಘಟಕದ 10 ಕಿ.ಮೀ. ವ್ಯಾಪ್ತಿಯೊಳಗೆ ವಾಸವಾಗಿರಬೇಕು. ಈ ಬಗ್ಗೆ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯಲ್ಲಿ ಸ್ಥಳೀಯ ವಿಳಾಸದ ಮಾಹಿತಿ ಹೊಂದಿರಬೇಕು.

ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಮತ್ತು ವರ್ಗಾವಣೆ ಪ್ರಮಾಣ ಪತ್ರ ಜೆರಾಕ್ಸ್ ಪ್ರತಿಯನ್ನು ಲಗತ್ತಿಸುವುದು. ಆಯ್ಕೆ ವಿಧಾನ ದೈಹಿಕ ಸಾಮರ್ಥ್ಯ, ಮೌಖಿಕ ಸಂದರ್ಶನ ಕೈಗೊಳ್ಳಲಾಗುತ್ತದೆ. ಪುರುಷ ಅಭ್ಯರ್ಥಿಯ ಎತ್ತರ 168 ಸೆ.ಮೀ ಮತ್ತು ತೂಕ ಕನಿಷ್ಠ 50 ಕೆ.ಜಿ ಹೊಂದಿರಬೇಕು. ಅಭ್ಯರ್ಥಿಯು ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರಬಾರದು. ಅಭ್ಯರ್ಥಿಯು ಯಾವುದೇ ರಾಜಕೀಯ ಪಕ್ಷಗಳಲ್ಲಿ ತೊಡಗಿರಬಾರದು.

ಗೃಹರಕ್ಷಕರ ಹುದ್ದೆಯು ಸ್ವಯಂ ಸೇವಕ ಹುದ್ದೆಯಾಗಿದ್ದು, ಯಾವುದೇ ಸಂಬಳವಿರುವುದಿಲ್ಲ. ಭರ್ತಿಯಾದ ಗೃಹರಕ್ಷಕನು ಸ್ವಯಂ ಸೇವಕ ಗೃಹರಕ್ಷಕನಾಗಿರುತ್ತಾನೆಯೇ ಹೊರತು ಸರ್ಕಾರಿ ನೌಕರ ಅಥವಾ ಸಿಬ್ಬಂದಿಯಾಗಿರುವುದಿಲ್ಲ. ವಿಶೇಷ ಕೌಶ್ಯಲತೆ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು (ಡ್ರೆöÊವಿಂಗ್, ಎಲೆಕ್ಟಿçಷಿಯನ್, ಕಂಪ್ಯೂಟರ್ ಆಪರೇಟರ್, ಪೇಂಟರ್ ಮತ್ತು ಜಿಲ್ಲಾ ಮಟ್ಟ, ರಾಜ್ಯ ಮಟ್ಟ, ಮತ್ತು ರಾಷ್ಟ್ರ ಮಟ್ಟದ ಕ್ರೀಡಾಪಟುಗಳಿಗೆ ಪ್ರಾಥಮಿಕ ಆದ್ಯತೆ ನೀಡಲಾಗುವುದು).

ಸಂಡೂರು, ಕುಡುತಿನಿ, ತೆಕ್ಕಲಕೋಟೆ, ತೋರಣಗಲ್ಲು, ಕುರುಗೋಡು ಮತ್ತು ಸಿರುಗುಪ್ಪ ಘಟಕಗಳಲ್ಲಿ ಸೇರಬಯಸುವ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮAದಿರದ ಗೃಹರಕ್ಷಕ ದಳದ ಕಚೇರಿಯಲ್ಲಿ ನೀಡಲಾಗುವುದು.

ಸೂಚನೆ: ಯಾವುದೇ ಅಭ್ಯರ್ಥಿಯು ಇಲಾಖೆಯ ಹೊರಗಾಗಲಿ ಅಥವಾ ಒಳಗಾಗಲಿ ಉದ್ಯೋಗ ಪಡೆಯುವ ಸಲುವಾಗಿ ಯಾವುದೇ ವ್ಯಕ್ತಿಗೆ ಹಣ ನೀಡುವುದು ಅಥವಾ ಯಾವುದೇ ವಿಧವಾದ ಪಾರತೋಷಕ ನೀಡುವುದು ಮಾಡಬಾರದು. ಯಾವುದೇ ವಿಧವಾದ ಹಣ ವಸೂಲಾತಿಗೆ ಯಾರಿಗೂ ಅಧಿಕಾರ ನೀಡಿರುವುದಿಲ್ಲ, ಈ ದಿಶೆಯಲ್ಲಿ ಮಧ್ಯವರ್ತಿಗಳ ಭರವಸೆಗಳಿಗೆ ಮಾರು ಹೋಗಬಾರದೆಂದು ಈ ಮೂಲಕ ಅಭ್ಯರ್ಥಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊ.7975872247 ಮತ್ತು ದೂ.08392-276421 ಗೆ ಸಂಪರ್ಕಿಸಬಹುದು ಎಂದು ಗೃಹರಕ್ಷಕರ ಆಯ್ಕೆ ಸಮಿತಿಯ ಸಮಾದೇಷ್ಟರು ಹಾಗೂ ಸದಸ್ಯ-ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read