JOB ALERT : ಕಮ್ಯುನಿಟಿ ಹೆಲ್ತ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

ಮಡಿಕೇರಿ  :   ರಾಷ್ಟ್ರೀಯ ಆಯುಷ್ ಅಭಿಯಾನದ ಯೋಜನೆಯಡಿ ಕೊಡಗು ಜಿಲ್ಲಾ ಆಯುಷ್ ಇಲಾಖೆಯಲ್ಲಿ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಕಮ್ಯುನಿಟಿ ಹೆಲ್ತ್ ಆಫಿಸರ್(ಸಿಎಚ್ಒ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ತಮ್ಮ ಸಂಪೂರ್ಣ ವಿವರವುಳ್ಳ ಅರ್ಜಿಯನ್ನು ನಿಗಧಿಪಡಿಸಿದ ಕನಿಷ್ಠ ವಿದ್ಯಾರ್ಹತೆ, ವಯೋಮಿತಿ ಹಾಗೂ ಇತರೆ ಎಲ್ಲಾ ದಾಖಲಾತಿಗಳೊಂದಿಗೆ ಸಲ್ಲಿಸಲು ಜನವರಿ, 31 ಕೊನೆ ದಿನವಾಗಿದೆ. ನೇರ ಸಂದರ್ಶನಕ್ಕೆ ದಿನಾಂಕವನ್ನು ನಂತರ ತಿಳಿಸಲಾಗುವುದು.

ಕಮ್ಯುನಿಟಿ ಹೆಲ್ತ್ ಆಫಿಸರ್(ಸಿಎಚ್ಒ) ಸ.ಆ.ಚಿ ಶ್ರೀಮಂಗಲ-01 ಹುದ್ದೆ, ಸ.ಹೋ.ಚಿ ಪಾರಾಣೆ-01 ಹುದ್ದೆ, ಕನಿಷ್ಠ ವಿದ್ಯಾರ್ಹತೆ ಬಿಎಎಂಎಸ್ ಮಾಸಿಕ ವೇತನ ರೂ.40,000 (ರೂ.25,000 ಒಂದು ತಿಂಗಳಿಗೆ ಮತ್ತು ರೂ.15 ಸಾವಿರ ಒಂದು ತಿಂಗಳಿಗೆ ಪರ್ಮಾಪಾರ್ಮೆನ್ಸ್ ಪೇಮೆಂಟ್) ಸಾ.ಅಭ್ಯರ್ಥಿ 01. ಈ ಹುದ್ದೆಯು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ Community Health Officer (CHO) ಹುದ್ದೆಗಳನ್ನು ಒಂದು ವರ್ಷದವರಗೆ ಅಥವಾ ಸದರಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಖಾಯಂ ವೈದ್ಯಾಧಿಕಾರಿಗಳ ಹುದ್ದೆಗಳು ಭರ್ತಿಯಾಗುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಚಾಲ್ತಿಯಲ್ಲಿರುತ್ತದೆ. ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು.
ಅರ್ಜಿಯನ್ನು ಈ ಕಚೇರಿಯಿಂದ ಪಡೆದು ಸಲ್ಲಿಸಬೇಕಾದ ವಿಳಾಸ, ಜಿಲ್ಲಾ ಆಯುಷ್ ಅಧಿಕಾರಿಗಳು, ಜಿಲ್ಲಾ ಆಯುಷ್ ಕಛೇರಿ, ಮಹದೇವಪೇಟೆ, ಮಡಿಕೇರಿ-571201, ಕೊಡಗು ಜಿಲ್ಲೆ ಇಲ್ಲಿಗೆ ಸಲ್ಲಿಸಬೇಕು ಎಂದು ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಆಯುಷ್ ಅಧಿಕಾರಿ ರೇಣುಕಾದೇವಿ ಅವರು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read