JOB ALERT : 2025-26 ನೇ ಸಾಲಿನ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

ಬೆಂಗಳೂರು : 2025-26ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ ಸೇವೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅನ್-ಲೈನ್ ನಲ್ಲಿ ಅರ್ಜಿಯನ್ನು Edit ಮಾಡಲು ಅವಕಾಶ ನೀಡಲಾಗಿದೆ.

2025-26ನೇ ಶೈಕ್ಷಣಿಕ ಸಾಲಿನಲ್ಲಿ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳೂ ಒಳಗೊಂಡಂತೆ) ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ (ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಒಳಗೊಂಡಂತೆ) ಆನ್ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಿಕೊಳ್ಳುವ ಸಂಬಂಧ ಅತಿಥಿ ಉಪನ್ಯಾಸಕರ ಸೇವೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅನ್-ಲೈನ್ ಅರ್ಜಿಯನ್ನು Edit ಮಾಡಲು ಅವಕಾಶ ಕಲ್ಪಿಸುವಂತೆ ಹಲವಾರು ಮನವಿ ಸಲ್ಲಿಸಿರುವುದನ್ನು ಗಮನಿಸಿ ಈ ಕೆಳಕಂಡ ದಿನಾಂಕದ ಒಳಗಾಗಿ ಸದರಿ ನ್ಯೂನತೆಗಳನ್ನು ಸರಿಪಡಿಸಿ ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಅತಿಥಿ ಉಪನ್ಯಾಸಕರ ಸೇವೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅನ್-ಲೈನ್ ಅರ್ಜಿಯನ್ನು Edit ಮಾಡಲು ಅವಕಾಶದ ದಿನಾಂಕವನ್ನು ಅಕ್ಟೋಬರ್ 12 ರವರೆಗೆ ವಿಸ್ತರಿಸಲಾಗಿದೆ.


2025-26ನೇ ಸಾಲಿನ 1, 3, ಮತ್ತು 5ನೇ ಸೆಮಿಸ್ಟರ್ ಗಳ ಕಾರ್ಯಭಾರ ವಿವರಗಳನ್ನು ಪ್ರಾಂಶುಪಾಲರು EMIS ನಲ್ಲಿ UPDATE ಮಾಡುವುದು.2024-25ನೇ ಸಾಲಿನಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆ ಮೂಲಕ ಆಯ್ಕೆಗೊಂಡ ಅತಿಥಿ ಉಪನ್ಯಾಸಕರ ಮಾಹಿತಿಯನ್ನು ಪ್ರಾಂಶುಪಾಲರು EMIS ನಲ್ಲಿ ONBOARD ಮಾಡದೇ ಇರುವುದು ಇಲಾಖಾ ಗಮನಕ್ಕೆ ಬಂದಿದ್ದು ಈ ಕೂಡಲೇ ಸಂಬಂಧಿಸಿದ ಪ್ರಾಂಶುಪಾಲರು ಸದರಿ ಅತಿಥಿ ಉಪನ್ಯಾಸಕರ ಮಾಹಿತಿಯನ್ನು EMIS ನಲ್ಲಿ ಒದಗಿಸಲು ಅವಕಾಶ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read