ಜಿಯೋ ಗ್ರಾಹಕರಿಗೆ ಬಂಪರ್: ಹೊಸ ಆಫರ್ ನಲ್ಲಿ ಅಗ್ಗದ ಬೆಲೆಗೆ ಸಿಗ್ತಿದೆ 11 ತಿಂಗಳ ‘ಮಾನ್ಯತೆ’

ಮುಖೇಶ್ ಅಂಬಾನಿ ಒಡೆತನದ ಟೆಲಿಕಾಂ ಕಂಪನಿ ಜಿಯೋ ಇತ್ತೀಚೆಗೆ ತನ್ನ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಬದಲಾಯಿಸಿದೆ. ಕಂಪನಿ ತನ್ನ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಶೇಕಡಾ 25 ರಷ್ಟು ಹೆಚ್ಚಿಸಿದೆ. ಇದ್ರಿಂದಾಗಿ ಜಿಯೋ ಗ್ರಾಹಕರ ಜೇಬಿಗೆ ಕತ್ತರಿ ಬೀಳ್ತಿದೆ. ಈ ಮಧ್ಯೆ ಅಗ್ಗದ ರಿಚಾರ್ಜ್‌ ಪ್ಲಾನ್‌ ಹುಡುಕ್ತಿರುವ ಗ್ರಾಹಕರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ.

ಜಿಯೋ ಸಿಮ್‌ ಬಳಕೆದಾರರಿಗೆ ಜಿಯೋ ಹೊಸ ಆಫರ್‌ ನೀಡಿದೆ. ಈ ಯೋಜನೆ ಬೆಲೆ 1899 ರೂಪಾಯಿ. ಇದು ಜಿಯೋದ ಅತ್ಯಂತ ಬೆಸ್ಟ್‌ ಪ್ಲಾನ್‌ ಗಳಲ್ಲಿ ಒಂದು. ಯಾಕೆಂದ್ರೆ ಬೆಲೆ ಕಡಿಮೆಯಿದ್ದು, ದೀರ್ಘ ಮಾನ್ಯತೆಯನ್ನು ಗ್ರಾಹಕರು ಪಡೆಯಬಹುದಾಗಿದೆ.

ಜಿಯೋದ ಈ ಯೋಜನೆಯಲ್ಲಿ, ನೀವು ಒಟ್ಟು 336 ದಿನಗಳ ಅಂದರೆ 11 ತಿಂಗಳುಗಳ ಮಾನ್ಯತೆಯನ್ನು ಪಡೆಯುತ್ತೀರಿ. ಕಂಪನಿ ಈ ಯೋಜನೆಯಲ್ಲಿ ಅನಿಯಮಿತ ಕರೆ ಸೌಲಭ್ಯವನ್ನು ನೀಡ್ತಿದೆ. ಒಟ್ಟು 3600 ಉಚಿತ ಎಸ್‌ಎಂಎಸ್‌ ಗ್ರಾಹಕರು ಪಡೆಯಬಹುದು.

ಈ ಯೋಜನೆಯಲ್ಲಿ ಜಿಯೋ ಗ್ರಾಹಕರಿಗೆ 24GB ಡೇಟಾವನ್ನು ನೀಡುತ್ತಿದೆ.  ಜಿಯೋ ಟಿವಿಗೆ ಉಚಿತ ಪ್ರವೇಶ, ಜಿಯೋ ಸಿನೆಮಾಕ್ಕೆ ಉಚಿತ ಚಂದಾದಾರಿಕೆ ಸೇರಿದಂತೆ ಕೆಲ ಸೌಲಭ್ಯಗಳು ಈ ಯೋಜನೆಯಲ್ಲಿ ಲಭ್ಯವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read