ಕಾರು ಕಳ್ಳತನವಾಗುವ ಆತಂಕ ದೂರ ಮಾಡುತ್ತೆ ʼಜಿಯೋʼ ದ ಹೊಸ ಸಾಧನ…! ಇಲ್ಲಿದೆ ಅದರ ವಿವರ

ಕಾರು ಕಳ್ಳತನದ ಭಯ ಎಲ್ಲರನ್ನು ಕಾಡುತ್ತದೆ. ಈಗಿನ ದಿನಗಳಲ್ಲಿ ಕಾರು ಕಳ್ಳತನ ಪ್ರಕರಣ ಕೂಡ ಹೆಚ್ಚಾಗಿದೆ. ಇದಕ್ಕೊಂದು ಫುಲ್‌ ಸ್ಟಾಪ್‌ ಹಾಕಲು ಜಿಯೋ ಹೊಸ ಸಾಧನವೊಂದನ್ನು ಬಿಡುಗಡೆ ಮಾಡಿದೆ. ಜಿಯೋ ಬಿಡುಗಡೆ ಮಾಡಿರುವ ಈ ಸಾಧನ ಕಾರನ್ನು ಕಳ್ಳತನದಿಂದ ರಕ್ಷಿಸುತ್ತದೆ. ಜಿಯೋ ಮೋಟಿವ್ ಎಂದು ಈ ಡಿವೈಸ್‌ ಗೆ ಹೆಸರಿಡಲಾಗಿದೆ.

ಜಿಯೋ ಮೋಟಿವ್‌ ಬೆಲೆ 4,999 ರೂಪಾಯಿ. ನೀವು ಇದನ್ನು ಅಮೆಜಾನ್‌, ರಿಲಾಯನ್ಸ್‌ ಡಿಜಿಟಲ್‌ ಇ ಕಾಮರ್ಸ್‌ ಸೈಟ್‌ ಮತ್ತು ಜಿಯೋ ಡಾಟ್‌ ಕಾಮ್‌ ನಲ್ಲಿ ಖರೀದಿ ಮಾಡ್ಬಹುದು. ಜಿಯೋ ಮೋಟಿವ್‌ ಖರೀದಿ ಮಾಡಿದ ಗ್ರಾಹಕರಿಗೆ ಕಂಪನಿ ಒಂದು ವರ್ಷದ ಉಚಿತ ಚಂದಾದಾರಿಕೆ ನೀಡುತ್ತದೆ. ಒಂದು ವರ್ಷದ ನಂತ್ರ ಗ್ರಾಹಕ ಪ್ರತಿ ವರ್ಷ 599 ರೂಪಾಯಿಯನ್ನು ವಾರ್ಷಿಕ ಚಂದಾದಾರಿಕೆಯಾಗಿ ಪಾವತಿ ಮಾಡಬೇಕಾಗುತ್ತದೆ.

ಜಿಯೋ ಮೋಟಿವನ್ನು ಕಾರಿನ ಒಬಿಡಿ ಪೋರ್ಟ್‌ಗೆ ಸಂಪರ್ಕಿಸಬಹುದು. ಜಿಯೋ ಸಾಧನಗಳಲ್ಲಿ 4ಜಿ ಜಿಪಿಎಸ್‌ ಟ್ರ್ಯಾಕಿಂಗ್ ಸೌಲಭ್ಯ ಲಭ್ಯವಿದೆ. ಕಾರ್‌ ಎಲ್ಲಿದೆ ಎಂಬುದನ್ನು ನೀವು ಮನೆಯಲ್ಲೇ ಕುಳಿತು ಚೆಕ್‌ ಮಾಡ್ಬಹುದು. ಕಾರು ನಿರ್ದಿಷ್ಟ ಸ್ಥಳಕ್ಕೆ ಹೋಗುವ ಬದಲು ಬೇರೆಕಡೆ ಹೋದ್ರೆ ನಿಮಗೆ ಅದ್ರ ಮಾಹಿತಿ ಲಭ್ಯವಾಗುತ್ತದೆ.

ಬಿಲ್ಟ್‌ ಇನ್‌ ವೈಫೈ ಸೌಲಭ್ಯವನ್ನು ಇದಕ್ಕೆ ನೀಡಲಾಗಿದೆ. ಚಾಲಕನ ನಡತೆ ಹಾಗೂ ರಸ್ತೆ ಬಗ್ಗೆಯೂ ನೀವು ಇದ್ರಿಂದ ಮಾಹಿತಿ ಪಡೆಯಬಹುದು. ಜಿಯೋ ಸಿಮ್‌ ಗೆ ನೀವು ಇದನ್ನು ಸಂಪರ್ಕಿಸಬಹುದು. ಸದ್ಯ ಜಿಯೋ ಮೋಟರ್‌ ಗೆ ಅನೇಕ ಕೊಡುಗೆ ಲಭ್ಯವಿದೆ. ನೀವು ಶೇಕಡಾ 10ರಷ್ಟು ರಿಯಾಯಿತಿ ದರದಲ್ಲಿ ಇದನ್ನು ಖರೀದಿ ಮಾಡ್ಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read