ಜಿಯೋ ಬಳಕೆದಾರರಿಗೆ ಗುಡ್‌ ನ್ಯೂಸ್; ಬಂಪರ್ ಪ್ಲಾನ್ ಬಿಡುಗಡೆ ಮಾಡಿದ ಕಂಪನಿ

ಜಿಯೋ ದೀಪಾವಳಿಗೆ ಭರ್ಜರಿ ಆಫರ್‌ ನೀಡ್ತಿದೆ. ತನ್ನ ಹೊಸ ರಿಚಾರ್ಜ್‌ ಪ್ಲಾನ್‌ ಬಿಡುಗಡೆ ಮಾಡಿದೆ. ಈ ಪ್ಲಾನ್‌ ನಿತ್ಯದ ಡೇಟಾ, ಅನಿಯಮಿತ ಕರೆ, ಎಸ್‌ಎಂಎಸ್‌ ಮತ್ತು ಹೆಚ್ಚುವರಿ ಸಬ್ಸ್ಕ್ರೈಬ್‌ ಸೌಲಭ್ಯವನ್ನು ಹೊಂದಿದೆ. ಸದ್ಯ ಜಿಯೋ ತನ್ನೆಲ್ಲ ಪ್ಲಾನ್‌ ಗಳಿಗೆ ಒಟಿಟಿ ಸೌಲಭ್ಯ ನೀಡ್ತಿದೆ. ಈ ಹೊಸ ಪ್ಲಾನ್‌ ಗೆ ಕೂಡ ಒಂದು ಒಟಿಟಿ ಚಂದಾದಾರಿಕೆ ಲಭ್ಯವಿದೆ. ವಿಡಿಯೋ ಸ್ಟ್ರೀಮಿಂಗ್‌ ಸೌಲಭ್ಯವನ್ನು ಈ ಪ್ಲಾನ್‌ ನಲ್ಲಿ ನೀಡಲಾಗ್ತಿಲ್ಲ. ಬದಲಿಗೆ ಸ್ವಿಗ್ಗಿ ಒನ್‌ ಲೈಟ್‌ ಚಂದಾದಾರಿಕೆಯನ್ನು ನೀಡಲಾಗ್ತಿದೆ.

ಕಂಪನಿಯು ತನ್ನ ಹೊಸ ರೀಚಾರ್ಜ್ ಅನ್ನು ಪ್ರಿಪೇಯ್ಡ್ ಯೋಜನೆಗಳ ಪೋರ್ಟ್ಫೋಲಿಯೊಗೆ ಸೇರಿಸಿದೆ. ಜಿಯೋ ಈ ಪ್ಲಾನ್ ಬೆಲೆ 866 ರೂಪಾಯಿ. ಈ ಯೋಜನೆಯಲ್ಲಿ ಬಳಕೆದಾರರಿಗೆ ದೈನಂದಿನ 2ಜಿಬಿ ಡೇಟಾ ನೀಡ್ತಿದೆ. ಬಳಕೆದಾರರಿಗೆ 100 ಎಸ್‌ಎಂಎಸ್‌ ಉಚಿತವಾಗಿ ಸಿಗಲಿದೆ. ಈ ಪ್ಲಾನ್‌ 84  ದಿನಗಳ ವ್ಯಾಲಿಡಿಟಿಯೊಂದಿಗೆ ಬರಲಿದೆ. ದಿನದ ಡೇಟಾ ಖಾಲಿ ಆದ್ಮೇಲೆ 64Kbps ವೇಗದಲ್ಲಿ ಇಂಟರ್ನೆಟ್‌ ಸೌಲಭ್ಯ ಲಭ್ಯವಿರುತ್ತದೆ. ಅಲ್ಲದೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ಗೆ ಪ್ರವೇಶ ಲಭ್ಯವಿದೆ. ಈ ಪ್ಲಾನ್‌ ಜೊತೆ ಜಿಯೋ ಸಿನಿಮಾದ ಚಂದಾದಾರಿಕೆ ಸಿಗ್ತಿಲ್ಲ. ಅದರ ಬದಲು ಸ್ವಿಗ್ಗಿ ಒನ್‌ ಲೈಟ್‌ ಚಂದಾದಾರಿಕೆ ನೀಡ್ತಿದೆ.

ವಾಸ್ತವವಾಗಿ ಸ್ವಿಗ್ಗಿ ಒನ್‌ ಲೈಟ್‌ ಚಂದಾದಾರಿಕೆಗೆ 600 ರೂಪಾಯಿ ಪಾವತಿ ಮಾಡ್ಬೇಕು. 149 ರೂಪಾಯಿಗಿಂತ ಹೆಚ್ಚಿನ ಆರ್ಡರ್‌ ಮಾಡಿದ್ರೆ ಉಚಿತ ಡೆಲಿವರಿ ಲಭ್ಯವಿದೆ. ಜಿಯೋ ಈ ಪ್ಲಾನ್‌ ಪಡೆದವರಿಗೆ 10 ಉಚಿತ ಹೋಮ್ ಡೆಲಿವರಿ ಸಿಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read