ಜಿಯೋ ಸಿನಿಮಾದಲ್ಲಿ 2.2 ಕೋಟಿ ವೀಕ್ಷಕರಿಂದ ಧೋನಿಯ ಸಿಕ್ಸರ್‌ಗಳ ಆರ್ಭಟ ವೀಕ್ಷಣೆ

ರಾಜಸ್ಥಾನ ರಾಯಲ್ಸ್ ವಿರುದ್ಧದ ಟಾಟಾ ಐಪಿಎಲ್ ಪಂದ್ಯದಲ್ಲಿ ರನ್ ಚೇಸಿಂಗ್ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಸಿಕ್ಸರ್ ಸಿಡಿಸಿದಾಗ ಜಿಯೋ ಸಿನೆಮಾದಲ್ಲಿ ವೀಕ್ಷಕರ ಸಂಖ್ಯೆ 2.2 ಕೋಟಿ ದಾಟಿದೆ.

ಟೂರ್ನಿಯ ಆನ್‌ಲೈನ್ ಲೈವ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೋ ಸಿನೆಮಾದಲ್ಲಿ ಪ್ರಸ್ತುತ 2023ರ ಸೀಸನ್ ನಲ್ಲಿ ಇದು ಅತಿ ಹೆಚ್ಚು ವೀಕ್ಷಕರ ದಾಖಲೆ ಆಗಿದೆ.

ಕೊನೆಯ ಎಸೆತದವರೆಗೂ ವೀಕ್ಷಕರು ಉಸಿರು ಬಿಗಿಹಿಡಿದುಕೊಂಡು ಪಂದ್ಯದ ಏರಿಳಿತಗಳನ್ನು ವೀಕ್ಷಿಸಿದರು. ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಹಳೆಯ ದಿನಗಳ ಝಲಕ್ ತೋರಿಸಿದರು.

ಅತ್ಯುತ್ತಮ ಫಿನಿಷರ್ ಎಂದು ಪರಿಗಣಿಸಲ್ಪಟ್ಟಿರುವ ಧೋನಿ ಕೊನೆಯ ಓವರ್‌ನಲ್ಲಿ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಪಂದ್ಯವನ್ನು ರೋಮಾಂಚನಗೊಳಿಸಿದರು. ಆದರೆ, ರಾಜಸ್ಥಾನ ರಾಯಲ್ಸ್ ತಂಡದ ವೇಗದ ಬೌಲರ್ ಸಂದೀಪ್ ಶರ್ಮಾ ಕೊನೆಯ ಎಸೆತದಲ್ಲಿ ಕೇವಲ ಒಂದು ರನ್ ಬಿಟ್ಟುಕೊಟ್ಟರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮೂರು ರನ್‌ಗಳಿಂದ ಸೋತಿತು. ಧೋನಿ 188ರ ಸ್ಟ್ರೈಕ್ ರೇಟ್‌ನೊಂದಿಗೆ 17 ಎಸೆತಗಳಲ್ಲಿ 32 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಐಪಿಎಲ್‌ನ ಈ ಕುತೂಹಲಕಾರಿ ಪಂದ್ಯ ಬುಧವಾರ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಿತು.

ವೀಕ್ಷಕರ ವಿಷಯದಲ್ಲಿ, ಟಾಟಾ ಐಪಿಎಲ್-2023ರ ಡಿಜಿಟಲ್ ಸ್ಟ್ರೀಮಿಂಗ್ ಪಾಲುದಾರ ಜಿಯೋಸಿನಿಮಾ ಕಳೆದ ವಾರಾಂತ್ಯದಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಮೊದಲ ವಾರಾಂತ್ಯದಲ್ಲಿ ವೀಡಿಯೊ ವೀಕ್ಷಣೆಗಳ ಸಂಖ್ಯೆಯು ಸಂಪೂರ್ಣ ಹಿಂದಿನ ಋತುವಿನಲ್ಲಿ ವೀಡಿಯೊ ವೀಕ್ಷಣೆಗಳ ಸಂಖ್ಯೆಯನ್ನು ಮೀರಿಸಿದೆ.

ಜಿಯೋ ಸಿನೆಮಾದಲ್ಲಿ ವೀಡಿಯೊ ದಾಖಲೆಗಳು 147 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಕಂಡವು. ಜಿಯೋ ಸಿನೆಮಾದಲ್ಲಿ ಪ್ರತಿ ಪಂದ್ಯಕ್ಕೆ ಪ್ರತಿ ವೀಡಿಯೊಗೆ ಖರ್ಚು ಮಾಡುವ ಸಮಯವು ಶೇಕಡ 60ರಷ್ಟು ಹೆಚ್ಚಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read