120.5 ಕೋಟಿಗೆ ತಲುಪಿದ ಭಾರತೀಯ ಟೆಲಿಕಾಂ ಚಂದಾದಾರರ ಸಂಖ್ಯೆ

ನವದೆಹಲಿ: ಜಿಯೋ ಮತ್ತು ಏರ್ಟೆಲ್ ಬಳಕೆದಾರರ ಸಂಖ್ಯೆ ಹೆಚ್ಚಳದಿಂದಾಗಿ ಜೂನ್ ನಲ್ಲಿ ಭಾರತೀಯ ಟೆಲಿಕಾಂ ಚಂದಾರಾರರ ಸಂಖ್ಯೆ 120.5 ಕೋಟಿಗೆ ತಲುಪಿದೆ.

ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ವರದಿಯಲ್ಲಿ ಈ ಬಗ್ಗೆ ತಿಳಿಸಲಾಗಿದೆ. ವೈರ್ ಲೆಸ್ ಚಂದಾದಾರರ ಸಂಖ್ಯೆ 3.51 ಕೋಟಿ, ವೈರ್ ಲೈನ್ ಬಳಕೆದಾರರ ಸಂಖ್ಯೆಯಲ್ಲಿ 3.47 ಕೋಟಿಯಷ್ಟು ಹೆಚ್ಚಳವಾಗಿದೆ.

ವೈರ್ ಲೆಸ್ ಮತ್ತು ವೈರ್ ಲೈನ್ ಬಳಕೆ ವಿಭಾಗದಲ್ಲಿ ಜಿಯೋ ಮತ್ತು ಏರ್ಟೆಲ್ ಬೆಳವಣಿಗೆ ಸದೃಢವಾಗಿದೆ. ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಚಂದಾದಾರರು ಕಡಿಮೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.

ಮೇ ತಿಂಗಳ ಅಂತ್ಯಕ್ಕೆ ಟೆಲಿಕಾಂ ಚಂದದಾರರ ಸಂಖ್ಯೆ 120.3 ಕೋಟಿಯಷ್ಟು ಇತ್ತು. ಇದಕ್ಕೆ ಹೋಲಿಸಿದರೆ ಜೂನ್ ತಿಂಗಳಲ್ಲಿ ಶೇಕಡ 0.16ರಷ್ಟು ಹೆಚ್ಚಳವಾಗಿದೆ. ವೈರ್ ಲೆಸ್ ವಿಭಾಗದಲ್ಲಿ ಜಿಯೋಗೆ ಹೊಸದಾಗಿ 19.11 ಲಕ್ಷ ಏರ್ ಟೆಲ್ ಗೆ 12.52 ಲಕ್ಷ ಚಂದಾದಾರರ ಸೇರ್ಪಡೆಯಾಗಿದೆ. ವೈರ್ ಲೆಸ್ ವಿಭಾಗದಲ್ಲಿ ವೊಡಾಫೋನ್ ಐಡಿಯಾ, ಬಿಎಸ್ಎನ್ಎಲ್, ಎಂಟಿಎನ್ಎಲ್, ರಿಲಯನ್ಸ್ ಕಮ್ಯುನಿಕೇಷನ್ ಒಟ್ಟು 15.73 ಲಕ್ಷ ಚಂದಾದಾರರನ್ನು ಕಳೆದುಕೊಂಡಿದ್ದು, ವೊಡಾಫೋನ್ ಐಡಿಯಾ(ವಿಐಎಲ್)ನಿಂದ 8.6 ಲಕ್ಷ, ಬಿಎಸ್ಎನ್ಎಲ್ ನಿಂದ 7.25 ಲಕ್ಷ ಚಂದಾದಾರರು ಹೊರ ಹೋಗಿದ್ದಾರೆ.

ವೈರ್ ಲೈನ್ ವಿಭಾಗದಲ್ಲಿ ಜಿಯೋಗೆ ಹೊಸದಾಗಿ 4.34 ಲಕ್ಷ, ಏರ್ ಟೆಲ್ ಗೆ 44,611 ಚಂದಾದಾರರ ಸೇರ್ಪಡೆಯಾಗಿದ್ದು, ಬಿಎಸ್ಎನ್ಎಲ್ 60,644 ಚಂದದಾರರನ್ನು ಕಳೆದುಕೊಂಡಿದೆ.

ದೇಶದ ಒಟ್ಟು ಬ್ರಾಡ್‌ಬ್ಯಾಂಡ್ ಚಂದಾದಾರರ ಸಂಖ್ಯೆ ಜೂನ್‌ನಲ್ಲಿ 94 ಕೋಟಿಗೆ ಏರಿಕೆಯಾಗಿದ್ದು, ಹಿಂದಿನ ತಿಂಗಳ ಅಂತ್ಯಕ್ಕೆ 93.51 ಕೋಟಿ ಇತ್ತು. ಒಟ್ಟು 48.89 ಕೋಟಿ ಚಂದಾದಾರರನ್ನು ಹೊಂದಿರುವ ಜಿಯೋ ಬ್ರಾಡ್‌ಬ್ಯಾಂಡ್ ಮೊದಲ ಸ್ಥಾನದಲ್ಲಿದೆ. ಭಾರ್ತಿ ಏರ್‌ಟೆಲ್ 28.13 ಕೋಟಿ, VIL 12.78 ಕೋಟಿ ಮತ್ತು BSNL 2.5 ಕೋಟಿ ಚಂದಾದಾರರನ್ನು ಹೊಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read