ದಲಿತರಿಗೆಂದೇ ವಿಶೇಷ ಸಹಾಯವಾಣಿ ತೆರೆದ ಜಿಗ್ನೇಶ್ ಮೇವಾನಿ

ಸಾಮಾಜಿಕ ಕಾರ್ಯಕರ್ತ ಜಿಗ್ನೇಶ್ ಮೇವಾನಿ ದಲಿತರಿಗೆಂದು ವಿಶೇಷ ಸಹಾಯವಾಣಿ ತೆರೆದಿದ್ದು, ನಿಂದನೆ ಹಾಗೂ ದೌರ್ಜನ್ಯಕ್ಕೀಡಾಗುವ ದಲಿತರು ಕೂಡಲೇ ಈ ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಕಾಂಗ್ರೆಸ್ ಶಾಸಕರಾಗಿರುವ 43 ವರ್ಷ ವಯಸ್ಸಿನ ಮೇವಾನಿ, 2016ರಲ್ಲಿ ಸೋಮನಾಥ ಜಿಲ್ಲೆಯ ಊನಾದಲ್ಲಿ ಮೃತಪಟ್ಟ ಹಸುವಿನ ಚರ್ಮ ಸುಲಿಯುತ್ತಿದ್ದ ದಲಿತ ಕುಟುಂಬವೊಂದರ ಮೇಲೆ ದಾಳಿ ಮಾಡಿದವರ ವಿರುದ್ಧ ರಾಜ್ಯಾದ್ಯಂತ ನಡೆದ ಪ್ರತಿಭಟನೆಗಳ ಮೂಲಕ ಬೆಳಕಿಗೆ ಬಂದಿದ್ದರು.

ಮದುವೆಯ ಕಾರ್ಯಕ್ರಮವೊಂದರಲ್ಲಿ ಕುದುರೆಯೇರಿ ಸಾಗುತ್ತಿದ್ದ ವರನ ಮೇಲೆ ದಾಳಿಯಾಗಿದ್ದು, ಫ್ಯಾಶನಬಲ್ ಆಗಿ ಬಟ್ಟೆ ಧರಿಸಿದ್ದು, ಹೊಸ ಮೋಟಾರ್‌‌ಸೈಕಲ್‌ ಮೇಲೆ ಸವಾರಿ ಮಾಡಿದ್ದು, ಮೀಸೆ ತಿರುವಿದ್ದು, ಗ್ರಾಮದ ಬಾವಿಯಲ್ಲಿ ನೀರು ಸೇದಿದ್ದು, ಶಾಲೆಯಲ್ಲಿ ಸಾಮಾನ್ಯ ಕುಡಿಕೆಯಲ್ಲಿ ನೀರು ಕುಡಿದಿದ್ದು ಸೇರಿದಂತೆ ಅನೇಕ ಕ್ಷುಲ್ಲಕ ಕಾರಣಗಳಿಗೆ ದಲಿತರು ಹಾಗೂ ಮೇಲ್ವರ್ಗಗಳ ನಡುವೆ ಕಲಹ ನಡೆಯುತ್ತಿರುವ ಸುದ್ದಿಗಳ ಹಿನ್ನೆಲೆಯಲ್ಲಿ ಮೇವಾನಿ ಈ ಕೆಲಸಕ್ಕೆ ಮುಂದಾಗಿದ್ದಾರೆ.

“ಸಂಘ ಪರಿವಾರದವರ ಆಡಳಿತವಿರುವ ಗುಜರಾತ್‌ನಲ್ಲಿ ದಲಿತರ ಮೇಲೆ ದಾಳಿಗಳು ಜೋರಾಗಿವೆ. ದಲಿತರ ಮೇಲೆ ದೌರ್ಜನ್ಯಗಳಾದ ಅನೇಕ ಪ್ರಕರಣಗಳಲ್ಲಿ ಪೊಲೀಸರು ಎಫ್‌ಐಆರ್‌ಗಳನ್ನು ದಾಖಲಿಸುತ್ತಿಲ್ಲ, ಬದಲಾಗಿ ದೂರುದಾರರನ್ನೇ ಆಪಾದಿತರೊಂದಿಗೆ ’ಸೆಟಲ್‌ಮೆಂಟ್‌‌ʼಗೆ ಬರಲು ಹೇಳುತ್ತಾರೆ. ಎಫ್‌ಐಆರ್‌ ದಾಖಲಾದ ಪ್ರಕರಣಗಳಲ್ಲೂ ಸಹ ದೌರ್ಜನ್ಯದ ಪ್ರಕರಣಗಳಲ್ಲಿ ಸಾಬೀತಾಗುವ ಸಾಧ್ಯತೆಗಳು ತೀರಾ ಕಡಿಮೆ. ಇಂಥ ಪ್ರಕರಣಗಳನ್ನು ನಿಭಾಯಿಸಲು ಗುಜರಾತ್‌ನಲ್ಲಿ ವಿಶೇಷ ಕೋರ್ಟ್‌ಗಳಿಲ್ಲ,” ಎಂದು ಮೇವಾನಿ ತಿಳಿಸಿದ್ಧಾರೆ. ಮೇವಾನಿಯ ಆಪ್ತರೊಬ್ಬರು ನಿರ್ವಹಿಸುವ ಈ ಸಹಾಯವಾಣಿಯ ಸಂಖ್ಯೆ 9724344061.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read