ಸರ್ಕಾರಿ ಕೆಲಸ ಸಿಕ್ಕ 8 ತಿಂಗಳಿಗೆ ಲಂಚಾವತಾರ….! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಮಹಿಳಾ ಅಧಿಕಾರಿ

ಜಾರ್ಖಂಡ್​​ನ ಸಹಕಾರಿ ಇಲಾಖೆಯ ಮಹಿಳಾ ಅಧಿಕಾರಿ ಮಿಥಾಲಿ ಶರ್ಮಾ ಸ್ಥಳೀಯ ಸಂಸ್ಥೆಯೊಂದರಿಂದ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಇವರು ಕೇವಲ 8 ತಿಂಗಳ ಹಿಂದೆಯಷ್ಟೇ ಕೊಡೆರ್ಮಾದಲ್ಲಿ ಸಹಾಯಕ ರಿಜಿಸ್ಟ್ರರ್​ ಆಗಿ ನೇಮಕಗೊಂಡಿದ್ದರು ಎನ್ನಲಾಗಿದೆ.

ಕೋಡೆರ್ಮ ವ್ಯಾಪಾರ್​ ಸಹಕಾರ ಸಮಿತಿಗೆ 20 ಸಾವಿರ ರೂಪಾಯಿ ಲಂಚಕ್ಕೆ ಮಿಥಾಲಿ ಶರ್ಮಾ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ 20 ಸಾವಿರ ರೂಪಾಯಿಗಳ ಮೊದಲ ಭಾಗವಾಗಿ 10 ಸಾವಿರ ರೂಪಾಯಿಯನ್ನು ಜುಲೈ 7ರಂದು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಎಸಿಬಿ ಇವರನ್ನು ಬಂಧಿಸಿದೆ.

ಲಂಚ ಕೇಳಿದ ಹಿನ್ನೆಲೆಯಲ್ಲಿ ಸಮಿತಿಯ ಸದಸ್ಯ ರಾಮೇಶ್ವರ ಪ್ರಸಾದ್ ಯಾದವ್ ಎಸಿಬಿ ಡಿಜಿಗೆ ದೂರು ನೀಡಿದ್ದರು. ಎಸಿಬಿ ದೂರನ್ನು ಪರಿಶೀಲಿಸಿ ಆಕೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಬಲೆ ಬೀಸಿತ್ತು.

ಮಿಥಾಲಿ ಲಂಚ ತೆಗೆದುಕೊಳ್ಳುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ. ಮುಂದಿನ ಕ್ರಮಕ್ಕಾಗಿ ಎಸಿಬಿ ತಂಡ ಆಕೆಯನ್ನು ಹಜಾರಿಬಾಗ್‌ಗೆ ಕರೆದೊಯ್ದಿದ್ದು, ಈ ವಿಷಯದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಲಂಚ ಸ್ವೀಕರಿಸುತ್ತಿದ್ದ ವೇಳೆ ಶರ್ಮಾ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read