‘ಬಿಂದಿ’ ಧರಿಸಿದ್ದಕ್ಕೆ ಶಿಕ್ಷಕಿ ಕಪಾಳಮೋಕ್ಷ: ಬಾಲಕಿ ಆತ್ಮಹತ್ಯೆ

ಜಾರ್ಖಂಡ್‌ ನ ಧನ್‌ ಬಾದ್‌ ನಲ್ಲಿ 10 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಹಣೆಯ ಮೇಲೆ ‘ಬಿಂದಿ’ ಹಾಕಿಕೊಂಡು ಶಾಲೆಗೆ ಬಂದಿದ್ದಕ್ಕಾಗಿ ಶಿಕ್ಷಕಿ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಮನನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಾಂಶುಪಾಲರು ಮತ್ತು ಶಿಕ್ಷಕರಿಬ್ಬರನ್ನು ಧನ್ಬಾದ್ ಪೊಲೀಸರು ಬಂಧಿಸಿದ್ದಾರೆ.

ಉಷಾ ಕುಮಾರಿ(16) ಸೋಮವಾರ ತನ್ನ ಹಣೆಗೆ ‘ಬಿಂದಿ’ ಹಾಕಿಕೊಂಡು ಬಂದಿದ್ದಾಳೆ. ಶಾಲೆಯಲ್ಲಿ ಪ್ರಾರ್ಥನೆಯ ಸಮಯದಲ್ಲಿ ಮಹಿಳಾ ಶಿಕ್ಷಕಿಯಿಂದ ಅವಮಾನ ಮತ್ತು ಕಪಾಳಮೋಕ್ಷ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಗೆ ಬಂದ ಬಾಲಕಿ ಹನುಮಂತನಗರ ಕಾಲೋನಿಯಲ್ಲಿರುವ ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನ್‌ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬಾಲಕಿ ಟೆತುಲ್ಮರಿ ಪೊಲೀಸರನ್ನು ಉದ್ದೇಶಿಸಿ ಆತ್ಮಹತ್ಯೆ ಪತ್ರವನ್ನು ಬರೆದು ತೀವ್ರ ಹೆಜ್ಜೆ ಇಡುವ ಮೊದಲು ಅದನ್ನು ತನ್ನ ಸಮವಸ್ತ್ರದಲ್ಲಿ ಇಟ್ಟುಕೊಂಡಿದ್ದಳು. ಘಟನೆಗೆ ಶಾಲೆಯ ಶಿಕ್ಷಕರು ಮತ್ತು ಪ್ರಾಂಶುಪಾಲರೇ ಹೊಣೆ ಎಂದು ಪತ್ರದಲ್ಲಿ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಂತರ, ಆರೋಪಿ ಶಿಕ್ಷಕಿ ಮತ್ತು ಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮೃತನ ಕುಟುಂಬ ಸದಸ್ಯರು, ಸ್ಥಳೀಯರು ಮಂಗಳವಾರ ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದರು.

ಆದರೆ, ಟೆತುಲ್ಮರಿ ಪೊಲೀಸರು ಕಾನೂನು ಕ್ರಮದ ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಳಿಸಲಾಯಿತು.

ಟೆತುಲ್ಮರಿ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಆಶಿಶ್ ಕುಮಾರ್ ಯಾದವ್, ಸೋಮವಾರ ಈ ದುರದೃಷ್ಟಕರ ಘಟನೆ ಸಂಭವಿಸಿದೆ. ನಾವು ಸೇಂಟ್ ಕ್ಸೇವಿಯರ್ಸ್ ಶಾಲೆಯ ಪ್ರಾಂಶುಪಾಲರು ಮತ್ತು ಆರೋಪಿ ಶಿಕ್ಷಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read