ಕಣ್ಣಂಚಲ್ಲಿ ನೀರು ತರಿಸುತ್ತೆ ಮನೆ ಕೆಲಸದ ಬಾಲಕಿಗೆ ದಂಪತಿ ನೀಡುತ್ತಿದ್ದ ಚಿತ್ರಹಿಂಸೆ

ಮನೆಗೆಲಸಕ್ಕೆಂದು ಕರೆತಂದಿದ್ದ ಬಾಲಕಿಗೆ ಜಾರ್ಖಂಡ್‌ನ ರಾಂಚಿಯಲ್ಲಿನ ದಂಪತಿ ಚಿತ್ರಹಿಂಸೆ ನೀಡಿದ್ದು ಬಾಲಕಿ ಹಸಿವು  ನೀಗಿಸಿಕೊಳ್ಳಲು ಡಸ್ಟ್ ಬಿನ್ ನಲ್ಲಿರುವ ಆಹಾರ ಸೇವಿಸುತ್ತಿದ್ದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. 14 ವರ್ಷದ ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದು ಗುರುಗ್ರಾಮ್ ಮೂಲದ ದಂಪತಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸ್ ಮತ್ತು ಸಖಿಯ ಜಂಟಿ ತಂಡವು ದಂಪತಿಯ ಮನೆಯಿಂದ ಬಾಲಕಿಯನ್ನು ರಕ್ಷಿಸಿತು. ಬಾಲಕಿ ಅನುಭವಿಸಿದ ನಿರಂತರ ಚಿತ್ರಹಿಂಸೆ ಮತ್ತು ಹಲ್ಲೆಯಿಂದಾಗಿ ಆಕೆಗೆ ಹಲವಾರು ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಂಪತಿಗಳು ತಮ್ಮ ಮೂರೂವರೆ ವರ್ಷದ ಮಗಳನ್ನು ನೋಡಿಕೊಳ್ಳಲು ಐದು ತಿಂಗಳ ಹಿಂದೆ ಬಾಲಕಿಯನ್ನು ನೇಮಿಸಿಕೊಂಡಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಅವಧಿಯಲ್ಲಿ ಪತಿ-ಪತ್ನಿ ಇಬ್ಬರೂ ಆಕೆಯನ್ನು ಪ್ರತಿನಿತ್ಯ ಹೊಡೆಯುತ್ತಿದ್ದರು. ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಗೆ ಆಹಾರ ನೀಡದ್ದರಿಂದ ಆಕೆ ಕಸದ ತೊಟ್ಟಿಯಲ್ಲಿ ಎಸೆದ ಉಳಿದ ಆಹಾರವನ್ನು ತಿನ್ನುತ್ತಿದ್ದಳು.

ಸಖಿ ಕೇಂದ್ರದ ಉಸ್ತುವಾರಿ ಪಿಂಕಿ ಮಲಿಕ್ ನೀಡಿದ ದೂರಿನ ಪ್ರಕಾರ, ರಾಂಚಿಯ (ಜಾರ್ಖಂಡ್) ಹುಡುಗಿಯನ್ನು ಪ್ಲೇಸ್‌ಮೆಂಟ್ ಏಜೆನ್ಸಿಯ ಮೂಲಕ ನೇಮಿಸಿಕೊಳ್ಳಲಾಗಿದೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ನ್ಯೂ ಕಾಲೋನಿಯ ದಂಪತಿಗಳು ಬಾಲಕಿಯ ಮೇಲೆ ಹಲ್ಲೆ ಮಾಡಿದ್ದು, ಆಕೆಯ ಕೈ, ಕಾಲು ಮತ್ತು ಬಾಯಿಯಲ್ಲಿ ಹಲವಾರು ಗಾಯಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ದಂಪತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ನ್ಯೂ ಕಾಲೋನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read