ನೀವು ರಸ್ತೆಬದಿಯಲ್ಲಿ ಮಾರುವ ಗೋಲ್ಗಪ್ಪಾ ಸೇವಿಸ್ತೀರಾ ? ಹಾಗಾದ್ರೆ ನೀವು ತಿನ್ನುವ ಆಹಾರದ ಬಗ್ಗೆ ಎಚ್ಚರವಿರಬೇಕು. ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ಗೋಲ್ಗಪ್ಪ ತಯಾರಿಸಲು ಹಿಟ್ಟನ್ನು ಬೆರೆಸುವ ಪ್ರಕ್ರಿಯೆಯಲ್ಲಿ ಇಬ್ಬರು ತಮ್ಮ ಕಾಲುಗಳಿಂದ ಹಿಟ್ಟು ತುಳಿಯುತ್ತಿರುವ ವಿಡಿಯೋ ವೈರಲ್ ಆಗಿದ್ದು ಅವರನ್ನು ಬಂಧಿಸಲಾಗಿದೆ.
ಮಜಿಗವಾನ್ ಬಜಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಆರೋಪಿಗಳಾದ ಅಂಶು ಮತ್ತು ರಾಘವೇಂದ್ರ ಅನೈರ್ಮಲ್ಯ ಕ್ರಿಯೆಯಲ್ಲಿ ತೊಡಗಿದ್ದರು. ಹಿಟ್ಟಿನ ರುಚಿಯನ್ನು ಹೆಚ್ಚಿಸಲು ನೀರಿಗೆ ಹಾರ್ಪಿಕ್ ಮತ್ತು ಯೂರಿಯಾ ಸೇರಿದಂತೆ ಹಾನಿಕಾರಕ ರಾಸಾಯನಿಕಗಳನ್ನು ಸೇರಿಸಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ. ವೀಡಿಯೋದಿಂದ ಎಚ್ಚೆತ್ತ ಸ್ಥಳೀಯ ಅಧಿಕಾರಿಗಳು ಇಬ್ಬರನ್ನು ಬಂಧಿಸಿ ಸ್ಥಳದಲ್ಲಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ತನಿಖೆ ನಡೆಯುತ್ತಿದ್ದು ವಶಪಡಿಸಿಕೊಂಡ ವಸ್ತುವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
https://twitter.com/dhananjaynews/status/1846745369235141010?ref_src=twsrc%5Etfw%7Ctwcamp%5Etweetembed%7Ctwterm%5E1846745369235141010%7Ctwgr%5E0ca40ba95a81725d5b62e4a9771261bd1e4984ca%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fjharkhandduokneadgolgappadoughwithfeetuseharpicandureatoenhancetasteingarhwaarrestedaftervideogoesviral-newsid-n635450965