ಮಹಿಳಾ ಇಂಜಿನಿಯರ್ ಗೆ ಲೈಂಗಿಕ ಕಿರುಕುಳ; ಜೆಸ್ಕಾಂ ಹಿರಿಯ ಇಂಜಿನಿಯರ್ ಸಸ್ಪೆಂಡ್

ರಾಯಚೂರು: ಜೆಸ್ಕಾಂ ಮಹಿಳಾ ಎಂಜಿನಿಯರ್ ಗೆ ಹಿರಿಯ ಇಂಜಿನಿಯರ್ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಜೆಸ್ಕಾಂ ಇಇ ಶ್ರೀನಿವಾಸ್ ಸಸ್ಪೆಂಡ್ ಆದವರು. ರಾಯಚೂರಿನಲ್ಲಿ ಜೆಸ್ಕಾಂ ಇಇ ಶ್ರೀನಿವಾಸ್, ಮಹಿಳಾ ಇಂಜಿನಿಯರ್ ಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಕೇಳಿಬಂದಿತ್ತು. ಇಇ ಶ್ರೀನಿವಾಸ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂತ್ರಸ್ತ ಮಹಿಳೆ ಹಾಗೂ ಜೆಸ್ಕಾಂ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಇ ಶ್ರೀನಿವಾಸ್ ನನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

ರಾಯಚೂರಿನ 220 ಕೆವಿ ಸ್ವೀಕರಣಾ ಕೇಂದ್ರದಲ್ಲಿ ರಾತ್ರಿ ಪಾಳಿಯಲ್ಲಿದ್ದ ಮಹಿಳಾ ಇಂಜಿನಿಯರ್ ಜೊತೆ ಇಇ ಶ್ರೀನಿವಾಸ್ ಅಸಭ್ಯವಾಗಿ ವರ್ತಿಸಿದ್ದ. ಈ ಬಗ್ಗೆ ಮಹಿಳಾ ಇಂಜಿನಿಯರ್ ದೂರು ನೀಡಿದ್ದರು. ಅಲ್ಲದೇ ಹಿರಿಯ ಅಧಿಕಾರಿಗಳ ತಂಡ ಪ್ರಾಥಮಿಕ ತನಿಖೆ ನಡೆಸಿದ ವೇಳೆ ಮಹಿಳಾ ಇಂಜಿನಿಯರ್ ಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಸಾಕ್ಷ್ಯಾಧಾರ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read