ರಾಜಕೀಯ ದ್ವೇಷದಿಂದ ಜೆಡಿಎಸ್ –ಕಾಂಗ್ರೆಸ್ ಗುಂಪು ಘರ್ಷಣೆ: ಬೈಕ್ ಗೆ ಬೆಂಕಿ, ಹಲ್ಲೆ

ತುಮಕೂರು: ರಾಜಕೀಯ ದ್ವೇಷಕ್ಕಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕಡಗತ್ತೂರು ಗ್ರಾಮದಲ್ಲಿ ನಡೆದಿದೆ.

ಮಧುಗಿರಿ ಕ್ಷೇತ್ರದಲ್ಲಿ ಜೆಡಿಎಸ್ ಸೋತಿರುವ ಬಗ್ಗೆ ಪ್ರಸ್ತಾಪವಾಗಿ ಈ ವಿಚಾರಕ್ಕೆ ಕಡಗತ್ತೂರು ಗ್ರಾಮದ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ವಾಗ್ವಾದ ನಡೆದಿದೆ.

ಜೆಡಿಎಸ್ ನ ಮುದ್ದಪ್ಪ ಮತ್ತು ಕಾಂಗ್ರೆಸ್ ನ ಕೃಷ್ಣಪ್ಪ ಅವರ ನಡುವೆ ಗಲಾಟೆ ನಡೆದು ಗಲಾಟೆ ಬಳಿಕ ಮುದ್ದಪ್ಪ ಬೈಕ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇದಕ್ಕೆ ಪ್ರತಿಕಾರವಾಗಿ ಕೃಷ್ಣಪ್ಪನವರ ಮೇಲೆ ಗುಂಪು ಹಲ್ಲೆ ಮಾಡಿದೆ. ಕೃಷ್ಣಪ್ಪನ ತಲೆಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಕೊಡಿಸಲಾಗಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read