 ಮಂಡ್ಯ: ಸಹಾಯ ಕೇಳಿಕೊಂಡು ಇನ್ನು ಮುಂದೆ ಯಾರೂ ನನ್ನ ಮನೆ ಬಳಿ ಬರಬೇಡಿ ಎಂದು ಜನರಿಗೆ ಜೆಡಿಎಸ್ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ ತಿಳಿಸಿದ್ದಾರೆ.
ಮಂಡ್ಯ: ಸಹಾಯ ಕೇಳಿಕೊಂಡು ಇನ್ನು ಮುಂದೆ ಯಾರೂ ನನ್ನ ಮನೆ ಬಳಿ ಬರಬೇಡಿ ಎಂದು ಜನರಿಗೆ ಜೆಡಿಎಸ್ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ ತಿಳಿಸಿದ್ದಾರೆ.
ಮದ್ದೂರು ಕ್ಷೇತ್ರದ ಕೊಪ್ಪದಲ್ಲಿ ಮಾತನಾಡಿದ ಸುರೇಶ್ ಗೌಡ, ಇನ್ಮುಂದೆ ಯಾವುದೇ ಮದುವೆ ಸಮಾರಂಭಗಳಿಗೆ ಬಂದರೂ ಏನೂ ಮಾಡುವುದಿಲ್ಲ. ನಂಬಿದವರಿಂದಲೇ ನನಗೆ ಮೋಸ ಆಗಿದೆ. ನಾನೀಗ ಸೋತಿದ್ದೇನೆ. ಚುನಾವಣೆಯ ಸೋಲಿನಿಂದ ನನ್ನ ಮನಸ್ಸಿಗೆ ಬೇಸರವಾಗಿ ಮನಸ್ಸು ಕಲ್ಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈಯಕ್ತಿಕ ಕಷ್ಟ ಹೇಳಿಕೊಂಡು ಯಾರೂ ಕೂಡ ನನ್ನ ಮನೆ ಬಳಿ ಬರಬೇಡಿ. ನಾನು ಚುನಾವಣೆಯಲ್ಲಿ ಸೋತು ಕಷ್ಟದಲ್ಲಿದ್ದೇನೆ. ಆದರೂ ಬಂದು ಸಹಾಯ ಕೇಳುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

		 Loading ...
 Loading ... 