ದಾಖಲೆಯ 5 ಲಕ್ಷ ರೂ.ಗೆ ಮಾರಾಟವಾದ ಸೋಲಿಲ್ಲದ ಸರದಾರ ‘ಜಯಸಿಂಹ’ ಟಗರು

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ‘ಜಯಸಿಂಹ’ ಹೆಸರಿನ ಟಗರು ದಾಖಲೆಯ 5 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

ಟಗರು ಕಾಳಗದಲ್ಲಿ ಅನೇಕ ಬಹುಮಾನ ಗೆದ್ದಿರುವ ಈ ಟಗರು 5 ಲಕ್ಷ ರೂಪಾಯಿಗೆ ಮಾರಾಟವಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ತೆಗ್ಗಿ ಗ್ರಾಮದ ಬಸವರಾಜ ತೆಗ್ಗಿ ಅವರು ಸಾಕಿರುವ ಈ ಟಗರು ಅನೇಕ ಟಗರು ಕಾಳಗಗಳಲ್ಲಿ 6 ಲಕ್ಷ ರೂಪಾಯಿ ಬಹುಮಾನ, ಬೈಕ್ ಗೆದ್ದಿದೆ.

ಎರಡು ವರ್ಷದ ಹಿಂದೆ ಬಸವರಾಜ ಅವರು 90 ಸಾವಿರ ರೂಪಾಯಿ ನೀಡಿ ಇದನ್ನು ಖರೀದಿಸಿದ್ದರು. ಆರ್.ಎಕ್ಸ್.ವೈ. ಟಗರು ಗ್ರೂಪ್ ನವರು 5 ಲಕ್ಷ ರೂಪಾಯಿ ನೀಡಿ ‘ಜಯಸಿಂಹ’ ಟಗರನ್ನು ಖರೀದಿ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read