ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ʼಜವಾನ್ʼ ನ ಅಧಿಕೃತ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದಾರೆ. ಎರಡು ನಿಮಿಷಗಳ ನಲವತ್ತೈದು ಸೆಕೆಂಡುಗಳ ಟ್ರೇಲರ್ ನಲ್ಲಿ ನಟ ಶಾರುಖ್ ರನ್ನು ದ್ವಿಪಾತ್ರದಲ್ಲಿ ಪರಿಚಯಿಸುತ್ತದೆ.
ತಂದೆ ಮತ್ತು ಮಗನ ದೃಶ್ಯ ಹೊಂದಿದ್ದು, ಸಂಪೂರ್ಣ ಆಕ್ಷನ್-ಪ್ಯಾಕ್ಡ್ ಎಂಟರ್ಟೈನರ್ ಆಗಿದೆ. ಅದರಲ್ಲೂ ಮುಖ್ಯವಾಗಿ ಚಿತ್ರದ ಡೈಲಾಗ್ ಭಾರಿ ಗಮನ ಸೆಳೆದಿದೆ.
ಹೌದು, ಈ ಚಿತ್ರದಲ್ಲಿ ಮಗನನ್ನು ಮುಟ್ಟುವ ಮೊದಲು, ತಂದೆಯೊಂದಿಗೆ ಮಾತನಾಡಿ ಎಂಬ ಡೈಲಾಗ್ ಇದ್ದು, ಭಾರಿ ಸದ್ದು ಮಾಡುತ್ತಿದೆ. ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸದಿರಲು 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಸಿಬಿಐನಿಂದ ಪ್ರಕರಣ ದಾಖಲಾಗಿರುವ ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ಜೊತೆಗಿನ ಸಂಭಾಷಣೆಯಾಗಿದೆ ಎಂದು ನೆಟ್ಟಿಗರು ವಿನೋದ ವ್ಯಕ್ತಪಡಿಸಿದ್ದಾರೆ.
ಶಾರುಖ್ ಮತ್ತು ಗೌರಿ ಖಾನ್ ಅವರಿಗೆ ಮೂವರು ಮಕ್ಕಳಿದ್ದಾರೆ. ಆರ್ಯನ್, ಸುಹಾನಾ ಮತ್ತು ಅಬ್ರಾಹಂ. ಅಕ್ಟೋಬರ್ 2, 2021 ರಂದು ಶಾರುಖ್ ಪುತ್ರ ಆರ್ಯನ್ ಅವರನ್ನು ಬಂಧಿಸಲಾಗಿತ್ತು. ಆರ್ಯನ್ ಖಾನ್ ಸುಮಾರು ಒಂದು ತಿಂಗಳು ಜೈಲಿನಲ್ಲಿ ಕಳೆದರು. ಅಕ್ಟೋಬರ್ 28ರಂದು ಬಾಂಬೆ ಹೈಕೋರ್ಟ್ ಜಾಮೀನು ನೀಡಿತು.
ಸಿನಿಮಾದ ಟ್ರೇಲರ್ ಅನ್ನು ಶಾರುಖ್ ಖಾನ್ ಹಂಚಿಕೊಂಡಿದ್ದಾರೆ. ಅಟ್ಲಿ ನಿರ್ದೇಶನದ ಜವಾನ್ ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ವಿಶೇಷ ಪಾತ್ರ ಮಾಡಿದ್ದಾರೆ. ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಸುನಿಲ್ ಗ್ರೋವರ್, ಯೋಗಿ ಬಾಬು, ರಿದ್ಧಿ ಡೋಗ್ರಾ, ಸಂಜೀತಾ ಭಟ್ಟಾಚಾರ್ಯ, ಗಿರಿಜಾ ಓಕ್, ಲೆಹರ್ ಖಾನ್, ಮತ್ತು ಆಲಿಯಾ ಖುರೇಷಿ ಮುಂತಾದ ನಟರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರವು ಸೆಪ್ಟೆಂಬರ್ 7 ರಂದು ಥಿಯೇಟರ್‌ಗಳಿಗೆ ಬರಲು ರೆಡಿಯಾಗಿದೆ.
https://twitter.com/FirdausLaibah/status/1697140361393750122?ref_src=twsrc%5Etfw%7Ctwcamp%5Etweetembed%7Ctwterm%5E1697140361393750122%7Ctwgr%5E5dabac8e32c934c5410f2e56266a9916a3f46384%7Ctwcon%5Es1_&ref_url=https%3A%2F%2Fwww.freepressjournal.in%2Fentertainment%2Fjawan-trailer-did-shah-rukh-khan-take-a-dig-at-sameer-wankhede-bete-ko-haath-lagane-se-pehle