ಪ್ರಬಲವಾದ ಸುಂಟರಗಾಳಿಯು ಛಾವಣಿಗಳನ್ನು ಉರುಳಿಸಿದ ಭಯಾನಕ ಘಟನೆಯ ವಿಡಿಯೋ ವೈರಲ್ ಆಗಿದೆ. ಅಮೆರಿಕದ ಅಲಬಾಮಾದ ಸೆಲ್ಮಾ ನಗರದಲ್ಲಿ ನಡೆದ ಘಟನೆ ಇದಾಗಿದೆ. ಸುಂಟರಗಾಳಿಗೆ ಹಲವಾರು ಮನೆಗಳ ಗೋಡೆಗಳು ಉರುಳಿ ಹೋಗಿದ್ದು, ಛಾವಣಿ ಗಾಳಿಯಲ್ಲಿ ಹಾರಿ ಹೋಗಿದೆ.
ಹಲವಾರು ಮರಗಳು ಉರುಳಿ ಬಿದ್ದಿದ್ದು, ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ. ವಿಡಿಯೋದಲ್ಲಿ ದೈತ್ಯಾಕಾರದ, ಸುತ್ತುತ್ತಿರುವ ಚಂಡಮಾರುತವನ್ನು ನೋಡಬಹುದು. ಸೆಲ್ಮಾ, ಸುಮಾರು 18 ಸಾವಿರ ನಿವಾಸಿಗಳ ನಗರ. ಅಲಬಾಮಾ ರಾಜಧಾನಿ ಮಾಂಟ್ಗೊಮೆರಿಯ ಪಶ್ಚಿಮಕ್ಕೆ ಸುಮಾರು 50 ಮೈಲಿಗಳು (80 ಕಿಲೋಮೀಟರ್) ದೂರದಲ್ಲಿದೆ.
ಬೆಂಕಿಯಿಂದ ದಟ್ಟವಾದ ಕಪ್ಪು ಹೊಗೆಯು ನಗರದ ಮೇಲೆ ಏರಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಚಂಡಮಾರುತದಿಂದಾಗಿ ಬೆಂಕಿ ಹೊತ್ತಿಕೊಂಡಿದೆಯೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
https://twitter.com/WeatherNation/status/1613611447736467472?ref_src=twsrc%5Etfw%7Ctwcamp%5Etweetembed%7Ctwterm%5E1613611447736467472%7Ctwgr%5Eb384d3ed3b46fa706809e27d5711fd4c2d5f9158%7Ctwcon%5Es1_&ref_url=https%3A%2F%2Fwww.india.com%2Fviral%2Ftornado-selma-alabama-video-shows-powerful-tornado-rip-through-us-city-death-toll-5850983%2F
https://twitter.com/FOX6Hardison/status/1613649097906429961?ref_src=twsrc%5Etfw%7Ctwcamp%5Etweetembed%7Ctwterm%5E1613649097906429961%7Ctwgr%5Eb384d3ed3b46fa706809e27d5711fd4c2d5f9158%7Ctwcon%5Es1_&ref_url=https%3A%2F%2Fwww.india.com%2Fviral%2Ftornado-selma-alabama-video-shows-powerful-tornado-rip-through-us-city-death-toll-5850983%2F
https://twitter.com/ChadBlue83/status/1613618224502870017?ref_src=twsrc%5Etfw%7Ctwcamp%5Etweetembed%7Ctwterm%5E161361822450287