BREAKING: ಜಾತ್ರಾ ಮಹೋತ್ಸವದಲ್ಲಿ ಕೊಂಡ ಹಾಯಲುಹೋಗಿ ಕಾಲು ಸುಟ್ಟುಕೊಂಡ 15 ಭಕ್ತರು

ಚಾಮರಾಜನಗರ: ಅಂಬಳೇ ಗ್ರಾಮದಲ್ಲಿ ಕೊಂಡ ಹಾಯಲು ಹೋಗಿ 15 ಭಕ್ತರು ಕಾಲು ಸುಟ್ಟುಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಅಂಬಲೇ ಗ್ರಾಮದಲ್ಲಿ ನಡೆದಿದೆ.

ಚಾಮುಂಡೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಈ ಘಟನೆ ನಡೆದಿದೆ. ಜಾತ್ರಾ ಮಹೋತ್ಸವದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ಬಳಿಕ ಭಕ್ತರು ಕೊಂಡ ಹಾದಿದ್ದರು. ಈ ವೇಳೆ 15 ಭಕ್ತರು ಕಾಲು ಸುಟ್ಟುಕೊಂಡಿದ್ದು, ಗಾಯಗೊಂಡಿದ್ದಾರೆ.

ಗಾಯಾಳುಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read