ಮಗನಿಗಾಗಿ ಕಾಮಿಕ್ ರೂಪದಲ್ಲಿ ʼಆರ್‌ಆರ್‌ಆರ್‌ʼ ಕಟ್ಟಿಕೊಟ್ಟ ಜಪಾನ್‌ ಮಹಿಳೆ

ರಾಮ್ ಚರಣ್ ತೇಜಾ ಹಾಗೂ ಜೂ ಎನ್‌ಟಿಆರ್‌ ಅಭಿನಯದ ಆರ್‌ಆರ್‌ಆರ್‌ ಚಿತ್ರದ ’ನಾಟು ನಾಟು’ ಹಾಡಿಗೆ ಆಸ್ಕರ್‌ ಗರಿ ಮೂಡುತ್ತಲೇ ಆ ಹಾಡೀಗ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರಗಳ ಹರಿದು ಬರುತ್ತಿರುವುದು ಯಾಕೋ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ.

ಜಗತ್ತಿನ ಯಾವ ಮೂಲೆಯಲ್ಲೂ ಸಹ ನಾಟು ನಾಟು ಹಾಡಿನ ಸ್ಟೆಪ್ ಅನುಕರಣೆ ಮಾಡುವವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಜಪಾನೀ ತಾಯಿಯೊಬ್ಬರು ತಮ್ಮ ಪುತ್ರನಿಗೆ ಆರ್‌ಆರ್‌ಆರ್‌ ಚಿತ್ರದ ಕಥೆಯನ್ನು ತಮ್ಮದೇ ಶೈಲಿಯಲ್ಲಿ ಕಥೆ ಪುಸ್ತಕದ ರೂಪದಲ್ಲಿ ನಿರೂಪಿಸುತ್ತಿರುವ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾಗಿದೆ. ಚಿತ್ರದ ಕಥಾ ಹಂದರವನ್ನು ಬಾಯಲ್ಲಿ ಹೇಳುವುದಕ್ಕಿಂತ ಹೀಗೆ ಚಿತ್ರಗಳನ್ನು ಬರೆದು ಕಥೆ ಹೇಳುವುದರಿಂದ ತನ್ನ ಮಗನಿಗೆ ಸುಲಭದಲ್ಲಿ ಅರ್ಥವಾಗುತ್ತದೆ ಎಂದು ತಾಯಿ ಹೀಗೆ ಮಾಡಿದ್ದಾರೆ.

ರಾಮ್ ಚರಣ್ ತೇಜಾ, ಜೂ ಎನ್‌ಟಿಆರ್‌ ಸೇರಿದಂತೆ ಚಿತ್ರದ ಪಾತ್ರಗಳ ಕಾರ್ಟೋನ್‌ ಆಕೃತಿಗಳನ್ನು ಬರೆಯಲಾದ ಪುಸ್ತಕವೊಂದರ ಮೂಲಕ ತನ್ನ 7 ವರ್ಷದ ಮಗನಿಗೆ ಚಿತ್ರಕಥೆ ವಿವರಿಸುವ ಐಡಿಯಾ ಈ ತಾಯಿಯದ್ದು.

https://youtu.be/NDzvlhNNFSE

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read