ಒಂಟಿತನ ನಿವಾರಣೆಗೆ 2761 ಬಾರಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದ ಮಹಿಳೆ ಅರೆಸ್ಟ್​

ಅವಶ್ಯಕತೆ ಇಲ್ಲದ ಸಮಯದಲ್ಲಿ ಪದೇ ಪದೇ ತುರ್ತು ನಂಬರ್​ಗೆ ಕರೆ ಮಾಡಿ ಕಿರಿಕಿರಿ ಮಾಡಿದ ಕಾರಣಕ್ಕಾಗಿ ಮಹಿಳೆಯನ್ನು ಬಂಧಿಸಿದ ಘಟನೆಯು ಜಪಾನ್​ನ ಪ್ರಿಫೆಕ್ಚರ್​ನಲ್ಲಿರುವ ಮಾಟ್ಸುಡೋ ನಗರದಲ್ಲಿ ಸಂಭವಿಸಿದೆ. ಇಲ್ಲಿನ ನಿವಾಸಿಯಾದ ಹಿರೋಕೊ ಹಟಗಾಮಿ ಎಂಬ 51 ವರ್ಷದ ಮಹಿಳೆಯು ಒಂಟಿತನ ಭಾವವನ್ನು ಅನುಭವಿಸುತ್ತಿದ್ದರು. ಹೀಗಾಗಿ ಕಳೆದ ಎರಡು ಮುಕ್ಕಾಲು ವರ್ಷದಲ್ಲಿ ತಾವು ಬರೋಬ್ಬರಿ 2761 ಬಾರಿ ತುರ್ತು ಸಂಖ್ಯೆಗೆ ಅನವಶ್ಯಕವಾಗಿ ಕರೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಮೈನಿಚಿ ಎಂಬ ಸ್ಥಳೀಯ ಮಾಧ್ಯಮವು ಮಾಡಿರುವ ವರದಿಗಳ ಪ್ರಕಾರ ಮಹಿಳೆಯು ಈ ರೀತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ನಾನು ಏಕಾಂಗಿತನವನ್ನು ಅನುಭವಿಸುತ್ತಿದ್ದೇನೆ. ನನ್ನ ಮಾತನ್ನು ಯಾರಾದರೂ ಕೇಳಬೇಕು ಹಾಗೂ ಅವರು ನನ್ನ ಕಡೆ ಗಮನ ಕೊಡಬೇಕು ಎಂದು ನಾನು ಬಯಸಿದ್ದೆ ಹೀಗಾಗಿ 2020ರ ಆಗಸ್ಟ್​​ 15 ರಿಂದ 2023ರ ಮೇ 25ರವರೆಗೆ ಮಾಟ್ಸುಡೋ ಅಗ್ನಿಶಾಮಕ ದಳ ಸಹಾಯವಾಣಿಗೆ 2700ಕ್ಕೂ ಅಧಿಕ ಬಾರಿ ಕರೆ ಮಾಡಿ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದು ಸುಳ್ಳು ಹೇಳುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಮೊದಲ ಈಕೆ ತಾನು ಅಗ್ನಿಶಾಮಕ ದಳಕ್ಕೆ ಸುಖಾ ಸುಮ್ಮನೇ ಕರೆ ಮಾಡಿದ್ದು ನಿಜ ಎಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಆದರೆ ವಿವಿಧ ಕಠಿಣ ಕಾನೂನು ಕ್ರಮಗಳನ್ನು ಜಾರಿ ಮಾಡುವ ಎಚ್ಚರಿಕೆ ನೀಡಿದ ಬಳಿಕ ಈಕೆ ಸತ್ಯ ಬಾಯ್ಬಿಟ್ಟಿದ್ದಾಳೆ. ಜೂನ್​ 20ರಂದು ಹಟಗಾಮಿ ವಿರುದ್ಧ ಅಧಿಕೃತ ವರದಿ ಸಲ್ಲಿಕೆ ಮಾಡುವವರೆಗೂ ಈಕೆ ಸಹಾಯವಾಣಿಗೆ ಕರೆ ಮಾಡುತ್ತಲೇ ಇದ್ದಳು ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read