ಭವಿಷ್ಯದಲ್ಲಿ ಪತಿ, ಮಕ್ಕಳೊಂದಿಗೆ ತಿರುಪತಿಯಲ್ಲಿ ನೆಲೆಸುವೆ; ನಟಿ ಜಾನ್ವಿ ಕಪೂರ್‌ ಹೇಳಿಕೆ

ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮ ಹುಟ್ಟುಹಬ್ಬ ಮತ್ತು ತಾಯಿ ಶ್ರೀದೇವಿಯ ಜನ್ಮದಿನದಂದು ಪ್ರತಿ ವರ್ಷ ತಿರುಪತಿಗೆ ಭೇಟಿ ನೀಡುತ್ತಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಪತಿ ಮತ್ತು ಮೂರು ಮಕ್ಕಳೊಂದಿಗೆ ತಿರುಪತಿಯಲ್ಲಿ ನೆಲಸುವ ಕನಸು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

ತಾನು ತಮ್ಮ ಪತಿಗೆ ತಲೆಗೆ ಎಣ್ಣೆ ಹಚ್ಚುತ್ತಾ, ಬಾಳೆ ಎಲೆಯಲ್ಲಿ ಊಟ ಮಾಡುತ್ತಾ ಸರಳ ಜೀವನ ನಡೆಸುವ ಕನಸು ಕಾಣುತ್ತಿರುವುದಾಗಿ ಹೇಳಿದ್ದಾರೆ.

ಜಾನ್ವಿ ಕಪೂರ್, ತಮ್ಮ ವಿವಾಹದ ಬಗ್ಗೆಯೂ ಮಾತನಾಡಿದ್ದಾರೆ. ಇಟಲಿಯ ಕ್ಯಾಪ್ರಿಯಲ್ಲಿ ಬ್ಯಾಚಲರೇಟ್ ಪಾರ್ಟಿ ಮಾಡಿಕೊಂಡು, ತಿರುಪತಿಯಲ್ಲಿ ವಿವಾಹವಾಗುವ ಯೋಜನೆ ಹೊಂದಿದ್ದಾರೆ. ತಮ್ಮ ತಾಯಿ ಶ್ರೀದೇವಿಯ ಮೈಲಾಪೂರ್‌ನ ಪೂರ್ವಜರ ಮನೆಯಲ್ಲಿ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲು ಬಯಸಿದ್ದೇನೆ ಎಂದಿದ್ದಾರೆ.

ಜಾನ್ವಿ ಕಪೂರ್ ಪ್ರಸ್ತುತ ಶಿಖರ್ ಪಹರಿಯಾ ಜೊತೆ ಸಂಬಂಧದಲ್ಲಿದ್ದಾರೆ. ಇಬ್ಬರೂ ತಮ್ಮ ಪ್ರೇಮವನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾರೆ. ಆದರೆ ಇಬ್ಬರೂ ಈಗಾಗಲೇ ತಮ್ಮ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದು, ವಿವಾಹಕ್ಕೆ ಇನ್ನೂ ಸಿದ್ಧರಿಲ್ಲ ಎಂದು ಹೇಳಿದ್ದಾರೆ.

ಜಾನ್ವಿ ಕಪೂರ್ ಅವರ ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅವರ ಅಭಿಮಾನಿಗಳು ಅವರ ಈ ಕನಸಿಗೆ ಶುಭ ಹಾರೈಸಿದ್ದಾರೆ.

In Starry Nights with Komal Nahta, Jahnvi expressed her idea of what her ideal married life would be like and Karan wasn't approving it !!
byu/AfterSomeTime inBollyBlindsNGossip

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read