ಸಿಬಿಐ ಶಾಕ್ ಗಳಿಗೆ ನಾನು ಹೆದರಲ್ಲ, ನನ್ನಿಂದ ಬೇರೆಯವರಿಗೆ ಶಾಕ್ ಹೊಡೆಯುತ್ತೆ: ಹುಲಿ ಕಾಡಲಿದ್ರೂ, ಜೈಲಲ್ಲಿದ್ರೂ ಹುಲಿನೇ: ಜನಾರ್ದನ ರೆಡ್ಡಿ

ಕಲಬುರಗಿ: ಸಿಬಿಐ ಶಾಕ್ ಗಳಿಗೆ ನಾನು ಹೆದರಲ್ಲ ಎಂದು ಮಾಜಿ ಸಚಿವ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ನನ್ನಿಂದ ಬೇರೆಯವರಿಗೆ ಶಾಕ್ ಹೊಡೆಯುತ್ತದೆ. ನಾನು ಶಾಕ್ ಗಳಿಗೆ ಹೆದರಲ್ಲ ಎಂದು ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಭಾಷಣ ಮಾಡಿದ್ದಾರೆ.

ಕಳೆದ 12 ವರ್ಷಗಳಿಂದ ಸಿಬಿಐ ಶಾಕ್ ನೋಡಿದ್ದೇನೆ. ನನಗೆ ಜನ ಬೆಂಬಲ ನೋಡಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಸಿಬಿಐ ಸೇರಿದಂತೆ ಯಾವುದಕ್ಕೂ ನಾನು ಹೆದರುವುದಿಲ್ಲ, ತಲೆಬಾಗುವುದಿಲ್ಲ ಎಂದು ಹೇಳಿದ್ದಾರೆ.

ಹುಲಿ ಕಾಡಲಿದ್ದರೂ ಒಂದೇ, ಜೈಲಲ್ಲಿದ್ದರೂ ಒಂದೇ. ನನ್ನ ಸ್ಪೀಡ್ ನೋಡಿ ಅನೇಕರಿಗೆ ಭಯ ಆರಂಭವಾಗಿದೆ. ನಾನು ಎಲ್ಲರನ್ನೂ ಹಾಲು ಎಂದು ನಂಬಿದ್ದೆ, ಇನ್ನೊಬ್ಬರ ಮೇಲೆ ಕಾಲಿಟ್ಟು ಮುಂದೆ ಹೋಗುವುದೇ ರಾಜಕೀಯ. ಇದು ನನಗೆ ಗೊತ್ತಿರಲಿಲ್ಲ. ಹಲವರನ್ನು ನಂಬಿ ಮೋಸ ಹೋದೆ. ಎಲ್ಲರೂ ಸೇರಿ ಮೀನಿನಂತೆ ನನ್ನನ್ನು ಬಲೆಗೆ ಹಾಕಿದರು. ಜೈಲಿನಿಂದ ಹೊರಬರಬಾರದು ಎಂದು ಕೇಸ್ ಮೇಲೆ ಕೇಸ್ ಹಾಕಿದರು ಎಂದು ಹೇಳಿದ್ದಾರೆ.

ನಾನು ಬಿಜೆಪಿಗೆ ಹೋಗುತ್ತಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡುವ ಪ್ರಶ್ನೆಯೇ ಇಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read