ಶ್ರೀನಗರ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಅಮರನಾಥ ಯಾತ್ರೆಗೆ ಧಕ್ಕೆಯಾಗಲ್ಲ ಎಂದು ಜಮ್ಮು-ಕಾಶ್ಮೀರ ಡಿಸಿಎಂ ಸುರಿಂದರ್ ಚೌಧರಿ ತಿಳಿಸಿದ್ದಾರೆ.
ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಅಳಿ ಅಮರನಾಥ ಯಾತ್ರೆ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಅಮರನಾಥ ಯತರೆ ಒಂದು ಧಾರ್ಮಿಕ ಕಾರ್ಯಕ್ರಮ. ಅಮರನಾಥ ಯಾತ್ರೆಗೆ ಬರಲು ಬಯಸುವವರು ಸ್ವ ಇಚ್ಛೆಯಿಂದ ಬರುತ್ತಾರೆ. ಕೆಲವರು ಕೇದಾರನಾಥ ಹೋಗುತ್ತಾರೆ. ಕೆಲವರು ಹಿಮ ಇರುವುದರಿಂದ ಹೋಗುವುದಿಲ್ಲ. ಪಹಗಾಮ್ ದಾಲಿಯಿಂದ ಯಾತ್ರೆ ಮೇಲೆ ಪರಿಣಾಮ ಬೀರಲ್ಲ ಎಂದು ತಿಳಿಸಿದ್ದಾರೆ.
ಪಹಲ್ಗಾಮ್ ಅಮರನಾಥ ಯಾತ್ರೆಯ ಪ್ರಮುಖ ಮೂಲ ಶಿಬಿರಗಳಲ್ಲಿ ಒಂದು. ಆದಾಗ್ಯೂ ಭಯೋತ್ಪಾದಕರ ದಾಳಿ ಅಮರನಾಥ ಯಾತ್ರೆಗೆ ಧಕ್ಕೆಯಾಗಲ್ಲಉಗ್ರರು ಜಮ್ಮು-ಕಾಶ್ಮೀರದ ಶ್ರೀಮಂತ ಸಂಸ್ಕೃತಿ ಹಾಗೂ ಸಂಪ್ರದಾಯದ ಅಡಿಪಾಯ ಅಲುಗಾಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.