ಉಗ್ರರ ವಿರುದ್ಧ ಕಾರ್ಯಾಚಾರಣೆ ಮತ್ತಷ್ಟು ಚುರುಕುಗೊಳಿಸಿರುವ ಭಾರತೀಯ ಸೇನೆ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಐದು ಭಯೋತ್ಪಾದಕರ ಮನೆಗಳನ್ನು ಧ್ವಂಸಗೊಳಿಸಿದೆ.
ಪಹಲ್ಗಾಮ್ ನಲ್ಲಿ ಉಗ್ರರು 28 ಪ್ರವಾಸಿಗರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಬೆನ್ನಲ್ಲೇ ಉಗ್ರರ ವಿರುದ್ಧ ಕಾರ್ಯಾಚಾರಣೆ ತೀವ್ರಗೊಳಿಸಿರುವ ಭಾರತೀಯ ಸೇನೆ ನಿನ್ನೆ ಉಗ್ರರಿಗೆ ಸೇರಿದ ಎರಡು ಮನೆಗಳನ್ನು ಧ್ವಂಸ ಮಾಡಿತ್ತು. ಲಷ್ಕರ್ ಎ-ಕಮಾಂಡರ್ ಓರ್ವನನ್ನು ಹತ್ಯೆ ಮಾಡಿತ್ತು. ಇದೀಗ ಮತ್ತೆ ಐವರು ಉಗ್ರರ ಮನೆಗಳನ್ನು ನಾಶಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಲಷ್ಕರ್-ಎ-ತೊಯ್ಬಾ ಕಮಾಂಡರ್ ಮನೆ ಸೇರಿದಂತೆ ಐವರು ಭಯೋತ್ಪಾದಕರ ಮನೆಯನ್ನು ಭಾರತೀಯ ಸೇನೆ ನಾಶಪಡಿಸಿದೆ. ಶೋಪಿಯಾನ್, ಕುಲ್ಗಾಮ್, ಪುಲ್ವಾಮಾ ಜಿಲ್ಲೆಗಳಲ್ಲಿ ಭದ್ರತಾಪಡೆಗಳು ಎಲಿಟಿ ಉಗ್ರರು ಹಾಗೂ ದಾಳಿಗೆ ಸಂಬಂಧಿಸಿದ ಶಂಕಿತರ ವಿರುದ್ಧ ಕಾಅರ್ಯಾಚರಣೆಯನ್ನು ನಡೆಸಿದೆ. ಶೋಪಿಯಾನ್ ನ ಚೋಟಿಪೋರಾ ಗ್ರಾಅಮದಲ್ಲಿ ಎಲ್ ಇಟಿ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟೆ ಉಗ್ರನ ಮನೆ ನೆಲಸಮವಾಗಿದೆ. ಈತ ಕಳೆದ ಮೂರ್ನಾಲ್ಕು ವರ್ಷಗಳಿಂದ ಭಯೋತ್ಪಾದನಾ ಚಟುವಟಿಕೆಯಲ್ಲಿ ನಿರತನಾಗಿದ್ದ.
ಕುಲ್ಗಾಮ್ ನ ಮಾತಲಂ ಪ್ರದೇಶದಲ್ಲಿ ಉಗ್ರ ಜಾಹಿದ್ ಅಹ್ಮದ್ ಮನೆ ಧ್ವಂಸಗೊಳಿಸಲಾಗಿದೆ. ಪುಲ್ವಾಮಾದ ಮುರ್ರಾನ್ ನಲ್ಲಿ ಅಹ್ಸಾನ್ ಉಲ್ ಹಕ್ ಮನೆ ಸ್ಫೋಟಿಸಿ ನೆಲಸಮ ಮಾಡಲಾಗಿದೆ. ಪುಲ್ವಾಮಾದ ಕಚಿಪೊರಾದಲ್ಲಿ ಹರಿಸ್ ಅಹ್ಮದ್ ಎಂಬ ಉಗ್ರನ ಮನೆ ಧ್ವಂಸಗೊಳಿಸಲಾಗಿದೆ. ಈ ಎಲ್ಲಾ ಭಯೋತ್ಪಾದಕರನ್ನು ವಾಅಂಟೆಡ್ ಲಿಸ್ಟ್ ಗೆ ಸೇರಿಸಲಾಗಿದೆ.