BREAKING: ಕಂದಕಕ್ಕೆ ಬಿದ್ದ ಕಾರ್: 10 ತಿಂಗಳ ಮಗು ಸೇರಿ ಮೂವರ ಸಾವು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರೆಸಿ ಜಿಲ್ಲೆಯಲ್ಲಿ ಕಾರ್ ಕಂದಕಕ್ಕೆ ಬಿದ್ದು, ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 10 ತಿಂಗಳ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ರೇಸಿ ಜಿಲ್ಲೆಯ ಚಸ್ಸಾನಾದ ಚಮಲು ಮೋರ್ ಬಳಿ ಆರು ಜನರನ್ನು ಹೊತ್ತೊಯ್ಯುತ್ತಿದ್ದ ಕಾರ್ ಪರ್ವತ ರಸ್ತೆಯಿಂದ ಬಿದ್ದಿದೆ. ವಾಹನವು ಆಳವಾದ ಕಂದರಕ್ಕೆ ಉರುಳಿದ್ದು, ಬಲಿಯಾದವರು ಒಂದೇ ಕುಟುಂಬದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಸ್ವಯಂಸೇವಕರು ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗೆ ನೆರವಾಗಿದ್ದಾರೆ. ಒಂದು ಶಿಶು ಸೇರಿದಂತೆ ಮೂವರು ನಿವಾಸಿಗಳು ಸಾವನ್ನಪ್ಪಿದ್ದಾರೆ. ಇನ್ನು ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರೇಸಿಯಿಂದ ಚಸ್ಸಾನ ಕಡೆಗೆ ಹೋಗುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read