‘ಪಠಾಣ್’​ ಯಶಸ್ಸಿನ ಬಳಿಕ ‘ಜವಾನ್’​ ನೋಡಲು ಅಭಿಮಾನಿಗಳ ಕಾತರ

ನಾಲ್ಕು ವರ್ಷಗಳ ಸಂಕ್ಷಿಪ್ತ ವಿರಾಮದ ನಂತರ, ಶಾರುಖ್ ಖಾನ್ ಅವರು ತಮ್ಮ ಇತ್ತೀಚಿಗೆ ಬಿಡುಗಡೆಯಾದ ಪಠಾಣ್​ನೊಂದಿಗೆ ಪುನಃ ಕಿಂಗ್ ಖಾನ್​ ಎಂದು ಕರೆಸಿಕೊಳ್ಳುತ್ತಿದ್ದಾರೆ. ಅವರು ಇದೀಗ ಬಾಲಿವುಡ್‌ನಲ್ಲಿ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು ಎಂದು ಎಲ್ಲರೂ ಹೇಳಿಕೊಳ್ಳುತ್ತಿದ್ದಾರೆ.

ಶಾರುಖ್ ಖಾನ್ ಅವರ ʼಪಠಾಣ್​ʼ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಇದು ಸಾರ್ವಕಾಲಿಕ ಬಾಲಿವುಡ್ ಓಪನರ್ ಆಗಿದ್ದು ಮಾತ್ರವಲ್ಲದೆ, ಬಾಕ್ಸ್ ಆಫೀಸ್‌ನಲ್ಲಿ ಅನೇಕ ದಾಖಲೆಗಳನ್ನು ಸಹ ಮುರಿದಿದೆ. ನಟನ ಚಿತ್ರವನ್ನು ಕೇವಲ 4 ದಿನಗಳಲ್ಲಿ 1.15 ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಪಠಾಣ್‌ನ ಭಾರೀ ಯಶಸ್ಸಿನ ನಡುವೆ, ಈಗ ಶಾರುಖ್​ ಅಭಿಮಾನಿಗಳು ಅವರ ಮುಂದಿನ ಚಿತ್ರ ಜವಾನ್‌ಗೆ ಕೌಂಟ್‌ ಡೌನ್ ಪ್ರಾರಂಭಿಸಿದ್ದಾರೆ. ಅಟ್ಲಿ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ ಜೊತೆ ಶಾರುಖ್​ ನಟಿಸಲಿದ್ದಾರೆ. ಜವಾನ್ ಬರುವ ಜೂನ್ 2ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ರೆಡ್ಡಿಟ್‌ನಲ್ಲಿನ ಬಳಕೆದಾರರು ಜವಾನ್‌ನ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, ಜವಾನ್​ ನೋಡಲು ಕಾತರರಾಗಿದ್ದೇವೆ. ಕೌಂಟ್​ಡೌನ್​ ಶುರುವಾಗಿದೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read