Shocking: ಕುಟುಂಬದ ಮೂವರನ್ನು ಹತ್ಯೆ ಮಾಡಿದ ಬಳಿಕ ಸಿನಿಮಾ ನೋಡಲು ತೆರಳಿದ್ದ ಮಗ…..!

Punjab News:बेटे की हत्या करने पहुंचा युवक, मां ने रोका तो उसे ही उतार दिया मौत के घाट, पढ़ें- खौफनाक वारदात - Young Man Killed The Woman With Kappa In Firozpur -

ಪಂಜಾಬ್ ನ ಜಲಂಧರ್ ನಲ್ಲಿ 30 ವರ್ಷದ ಯುವಕನೊಬ್ಬ ತನ್ನ ಪೋಷಕರು ಸೇರಿದಂತೆ ತಮ್ಮನನ್ನು ಕೊಂದಿರೋ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ಟವರ್ ಎನ್‌ಕ್ಲೇವ್ ಪ್ರದೇಶದಲ್ಲಿ ಮನೆಯೊಳಗೆ ತನ್ನ ಹೆತ್ತವರು ಮತ್ತು ಕಿರಿಯ ಸಹೋದರನನ್ನು ಕೊಂದ ನಂತರ ಆತ ಪೊಲೀಸರಿಗೆ ಶರಣಾಗಿದ್ದಾನೆ. ಆದರೆ ಬೆಚ್ಚಿಬೀಳಿಸುವ ಅಂಶವೆಂದರೆ ಮನೆಯವರನ್ನು ಹತ್ಯೆ ಮಾಡಿದ ಬಳಿಕ ಆರೋಪಿ ಸಿನಿಮಾ ನೋಡಲು ಥಿಯೇಟರ್ ಗೆ ತೆರಳಿದ್ದ.

ಆಸ್ತಿ ವಿಚಾರಕ್ಕೆ
ಆರೋಪಿ ಹರ್‌ಪ್ರೀತ್ ಸಿಂಗ್ (30) ತನ್ನ ತಂದೆ ಜಗ್‌ಬೀರ್ ಸಿಂಗ್, ತಾಯಿ ಅಮೃತಪಾಲ್ ಕೌರ್ ಮತ್ತು ಸಹೋದರ ಗಗನ್‌ದೀಪ್ ಸಿಂಗ್ ಮೇಲೆ ತನ್ನ ತಂದೆಯ ಪರವಾನಗಿ ಪಡೆದ ಗನ್‌ ನಿಂದ ಗುಂಡು ಹಾರಿಸಿದ್ದಾನೆ. ನಂತರ ಸಿನಿಮಾ ನೋಡಲು ಥಿಯೇಟರ್ ಗೆ ತೆರಳಿ ನಂತರ ಪೊಲೀಸರ ಬಳಿಗೆ ಹೋಗಿ ಶರಣಾಗಿದ್ದಾನೆ. ಈ ವೇಳೆ ಕೃತ್ಯ ನಡೆಸಿದ ಮನೆಯಲ್ಲಿ ಸ್ಫೋಟ ಮಾಡಲು ಎಲ್ಪಿಜಿ ಸಿಲಿಂಡರ್ ಅನ್ನು ಸಹ ಇಟ್ಟುಕೊಂಡಿದ್ದಾಗಿ ಆತ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.

ಅವನ ತಂದೆ ತನ್ನ ಹೆಸರಿಗೆ ಮನೆಯನ್ನು ನೋಂದಾಯಿಸಲು ನಿರಾಕರಿಸಿದ್ದು ಹರ್‌ಪ್ರೀತ್‌ ಈ ಕೃತ್ಯ ನಡೆಸಲು ಕಾರಣವಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯ ತಂದೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ದು ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದರು ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read