ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದ ಜೈಲರ್: 550 ಕೋಟಿಗೂ ಅಧಿಕ ಕಲೆಕ್ಷನ್

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಭರ್ಜರಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. 13ನೇ ದಿನದ ವೇಳೆಗೆ ಭಾರತದಲ್ಲಿ 300 ಕೋಟಿ ರೂ., ವಿಶ್ವಾದ್ಯಂತ 550 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ.

ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ‘ಜೈಲರ್’ 300 ಕೋಟಿ ರೂ. ನಿವ್ವಳ ಸಮೀಪದಲ್ಲಿದೆ. ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅಸಾಧಾರಣ ವ್ಯವಹಾರವನ್ನು ಮುಂದುವರೆಸಿರವ ‘ಜೈಲರ್’ ಚಿತ್ರ ಎರಡನೇ ಮಂಗಳವಾರದಂದು ಭಾರತದಲ್ಲಿ ತನ್ನ ಕಡಿಮೆ ಏಕದಿನ ಪ್ರದರ್ಶನವನ್ನು ದಾಖಲಿಸಿ ಕೇವಲ 4.50 ಕೋಟಿ ರೂ. ಗಳಿಸಿತು. 13 ದಿನಗಳ ನಂತರ ‘ಜೈಲರ್’ ಸುಮಾರು 291.80 ಕೋಟಿ ರೂಪಾಯಿಗಳನ್ನು ಗಳಿಸಿದೆ. ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂ. ಸಮೀಪವಿರುವ ರಜನಿಕಾಂತ್ ಅಭಿನಯದ ಎರಡನೇ ಚಿತ್ರವಾಗಿದೆ.

13 ದಿನಗಳಲ್ಲಿ 550 ಕೋಟಿ ದಾಟುವ ಮೂಲಕ ಚಿತ್ರದ ವಿಶ್ವಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಈ ನಡುವೆ ದಕ್ಷಿಣದ ಮತ್ತೊಂದು ದೊಡ್ಡ ಚಿತ್ರ ಶೀಘ್ರದಲ್ಲೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಸಿದ್ಧವಾಗಿದೆ. ಪ್ರಭಾಸ್ ಅಭಿನಯದ ‘ಸಲಾರ್’ ಬಿಡುಗಡೆ ಸಜ್ಜಾಗಿದ್ದು, ಸೋಮವಾರ ಬುಕಿಂಗ್ ಪ್ರಾರಂಭವಾಗಿ ಕೆಲವೇ ಗಂಟೆಗಳಲ್ಲಿ 107 ಸ್ಥಳಗಳಲ್ಲಿ 268 ಪ್ರದರ್ಶನಗಳಿಂದ $40.3K ಮೌಲ್ಯದ ಸರಿಸುಮಾರು 1400 ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಎಂದು ವ್ಯಾಪಾರ ವೆಬ್‌ಸೈಟ್ sacnilk ವರದಿ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read