ಪರಸ್ಪರ ದಾಟಿದ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳು: ವಿಡಿಯೋ ಹಂಚಿಕೊಂಡ ರೈಲ್ವೆ ಸಚಿವರು

ದೇಶದ ಹಲವೆಡೆ ಭಾರತೀಯ ರೈಲ್ವೇ ವಿವಿಧ ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ 13 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪ್ರಾರಂಭಿಸಲಾಗಿದೆ. 14ನೇ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.

ದೆಹಲಿ-ಜೈಪುರ-ಅಜ್ಮೀರ್ ನಲ್ಲಿ ವಂದೇ ಭಾರತ್ ಓಡಲಿದೆ. ಭಾರತ ನಿರ್ಮಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಭಾರತೀಯ ರೈಲ್ವೆಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ಹೆಮ್ಮೆಯ ಸಂಕೇತವಾಗಿದೆ. ಹೀಗಾಗಿ ಪ್ರತಿ ಮಾರ್ಗವನ್ನು ಪ್ರಧಾನಿ ಮೋದಿ ಅವರೇ ಉದ್ಘಾಟಿಸುತ್ತಾರೆ.

ಇತ್ತೀಚೆಗೆ ಭೋಪಾಲ್-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಧಾನಿ ಉದ್ಘಾಟಿಸಿದರು. ಇದು ಮಧ್ಯಪ್ರದೇಶದ ಭೋಪಾಲ್‌ನ ರಾಣಿ ಕಂಪ್ಲಾಪತಿ ನಿಲ್ದಾಣದಿಂದ ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣದ ನಡುವೆ ಚಲಿಸಲಿದೆ. ಏಪ್ರಿಲ್ 1, 2023 ರಂದು ಪ್ರಾರಂಭವಾದ ಚಾಲನೆಯಲ್ಲಿ, ವಂದೇ ಭಾರತ್ ಎಕ್ಸ್‌ಪ್ರೆಸ್ ತನ್ನ ಗರಿಷ್ಠ ವೇಗವನ್ನು ಗಂಟೆಗೆ 160 ಕಿ.ಮೀ. ವೇಗದಲ್ಲಿ ಓಡುವ ಮೂಲಕ, ಭಾರತದಲ್ಲಿ ವೇಗವಾಗಿ ಓಡುವ ರೈಲು ಎನಿಸಿಕೊಂಡಿತು.

ಭೋಪಾಲ್-ನವದೆಹಲಿ ರೈಲು ವೇಗದ ದಾಖಲೆಯನ್ನು ಸಾಧಿಸಿದ ಕೆಲವೇ ದಿನಗಳಲ್ಲಿ, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮತ್ತೊಂದು ವಿಡಿಯೋ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ಗಳಿಸುತ್ತಿದೆ. ಭಾರತದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು ಪರಸ್ಪರ ದಾಟುತ್ತಿರುವುದನ್ನು ನೋಡಬಹುದು. ಎರಡು ವಂದೇ ಭಾರತ್ ರೈಲುಗಳು ಪರಸ್ಪರ ದಾಟುತ್ತಿರುವ ವಿಡಿಯೋ ಸಿಕ್ಕಿರುವುದು ಇದೇ ಮೊದಲು.

ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ವಂದೇಭಾರತ್-ವಂದೇ ಭಾರತ್ ಭೇಟಿಯಾಗಿದೆ ಎಂದು ಬರೆದುಕೊಂಡಿದ್ದಾರೆ. ಚೆನ್ನೈ-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಮೈಸೂರು-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ಪರಸ್ಪರ ದಾಟುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

https://twitter.com/AshwiniVaishnaw/status/1644756344749297664?ref_src=twsrc%5Etfw%7Ctwcamp%5Etweetembed%7Ctwterm%5E1644756344749297664%7Ctwgr%5E66f1ca8ab72aefb720b5089d967c6e10f5f80791%7Ctwcon%5Es1_&ref_url=https%3A%2F%2Fzeenews.india.com%2Frailways%2Fjab-we-met-two-vande-bharat-express-trains-cross-each-other-at-high-speed-railway-minister-shares-video-2593995.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read