ಫಲವತ್ತತೆ ಹೆಚ್ಚಿಸಲು, ಸುಖಕರ ದಾಂಪತ್ಯ ಜೀವನಕ್ಕೆ ಇದು ‘ಬೆಸ್ಟ್’

ದಾಂಪತ್ಯ ಜೀವನದಲ್ಲಿ ಪತಿ-ಪತ್ನಿ ಮಧ್ಯೆ ಒತ್ತಡ ಸಾಮಾನ್ಯ. ಇದಕ್ಕೆ ಸೆಕ್ಸ್ ಮುಖ್ಯ ಕಾರಣವಾಗಬಹುದು. ಈ ವಿಚಾರದ ಬಗ್ಗೆ ಜನರು ಮಾತನಾಡಲು ಇಷ್ಟಪಡುವುದಿಲ್ಲ. ಆದ್ರೆ ಇದೊಂದು ಹೇಳಿಕೊಳ್ಳಲಾಗದ, ಅನುಭವಿಸಲೂ ಆಗದ ಸಮಸ್ಯೆ. ಇದು ನಿಮಗೊಂದೇ ಅಲ್ಲ ನಿಮ್ಮ ಸಂಗಾತಿಗೂ ಸಮಸ್ಯೆಯುಂಟು ಮಾಡುತ್ತದೆ.

ಸೆಕ್ಸ್ ಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಬಗೆ ಬಗೆ ಔಷಧಿಗಳಿವೆ. ಆದ್ರೆ ಅದ್ರ ಅಡ್ಡ ಪರಿಣಾಮವೇ ಹೆಚ್ಚು. ಅದ್ರ ಬದ್ಲು ಮನೆ ಮದ್ದು ಅನೇಕ ಸೆಕ್ಸ್ ಸಂಬಂಧಿ ಖಾಯಿಲೆಗಳನ್ನು ಗುಣಪಡಿಸುತ್ತದೆ. ಗಿಡಮೂಲಿಕೆಗಳ ಸೇವನೆಯಿಂದ ಫಲವತ್ತತೆ ಹೆಚ್ಚುತ್ತದೆ. ಆದ್ರೆ ಈ ಗಿಡಮೂಲಿಕೆ ಬಳಸುವ ಬದಲು ಒಮ್ಮೆ ವೈದ್ಯರ  ಸಲಹೆ ಪಡೆಯುವುದು ಸೂಕ್ತ.

ಅಶ್ವಗಂಧ : ಪುರುಷರನ್ನು ಉತ್ಸಾಹಿಸುವ ಕೆಲಸ ಮಾಡುತ್ತದೆ. ಫಲವತ್ತತೆ ಶಕ್ತಿ ಹೆಚ್ಚಿಸುತ್ತದೆ. ಪುರುಷರ ಸೆಕ್ಸ್ ಆರ್ಗನ್ ನಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಇದ್ರಿಂದ ಸೆಕ್ಸ್ ಇಚ್ಛೆ ಹೆಚ್ಚಾಗುತ್ತದೆ. ಇದು ಒತ್ತಡವನ್ನೂ ಕಡಿಮೆ ಮಾಡುತ್ತದೆ. ಆದ್ರೆ ಗರ್ಭವತಿಯರು ಇದನ್ನು ಸೇವನೆ ಮಾಡಬಾರದು.

ಶತಾವರಿ : ಮಹಿಳೆಯರಿಗೆ ಶತಾವರಿ ಪೌಡರ್ ಪ್ರಯೋಜನಕಾರಿ. ಇದು ಮಹಿಳೆ ಹಾಗೂ ಪುರುಷರ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ.

ಶಿಲಾಜಿತ್ : ಇದು ಆಯುರ್ವೇದ ಮಳಿಗೆಯಲ್ಲಿ ಲಭ್ಯವಿದೆ. ಇದು ಆಯಾಸ ನಿವಾರಿಸಿ, ಶಕ್ತಿ ಹೆಚ್ಚಿಸುತ್ತದೆ. ಶಿಲಾಜಿತ್ ಪುಡಿಯನ್ನು ಚಿಟಕಿ ಪ್ರಮಾಣದಲ್ಲಿ ಹಾಕಿ ಅಷ್ಟೇ ಪ್ರಮಾಣದಲ್ಲಿ ತುಪ್ಪ ಹಾಗೂ ಜೇನನ್ನು ಬೆರೆಸಿ ಸೇವನೆ ಮಾಡಬೇಕು.

ನೆಲ್ಲಿಕಾಯಿ : ನಿತ್ಯ ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಹಾಲಿಗೆ ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಹಾಕಿ ಕುಡಿಯುವುದ್ರಿಂದ ವೀರ್ಯ ಉತ್ಪಾದನೆ ಹೆಚ್ಚಾಗುತ್ತದೆ. ನಿಮಿರುವಿಕೆ ಹೆಚ್ಚಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read