ಈ ವಸ್ತುಗಳನ್ನು ದಾನ ಮಾಡಿದ್ರೆ ಬರುತ್ತೆ ದುರಾದೃಷ್ಟ

ದಾನ-ಧರ್ಮ ಅತ್ಯಂತ ಪುಣ್ಯದ ಕೆಲಸ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ್ರೆ ಅದಕ್ಕಿಂತ ಪುಣ್ಯದ ಕೆಲಸ ಇನ್ನೊಂದಿಲ್ಲ. ಆಹಾರ, ಹಣ ಮತ್ತು ಅಗತ್ಯ ವಸ್ತುಗಳನ್ನು ದಾನ ಮಾಡುವುದು ಸರ್ವೇಸಾಮಾನ್ಯ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದಾನ ಮಾಡುವುದರಿಂದ ಉಪದ್ರವ ದೂರವಾಗಿ ಅದೃಷ್ಟ ಮತ್ತು ಲಾಭ ನಿಮಗೆ ದೊರೆಯುತ್ತದೆ. ಆದ್ರೆ ದಿನಬಳಕೆಯ ಕೆಲವೊಂದು ವಸ್ತುಗಳನ್ನು ನೀವು ಅಪ್ಪಿತಪ್ಪಿಯೂ ದಾನ ಮಾಡಬೇಡಿ.

ಹಳಸಿದ ಆಹಾರ : ತಿನ್ನಲು ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ದಾನ ಮಾಡುವುದು ಸರಿಯಲ್ಲ. ಇದರಿಂದ ನೀವು ಕೋರ್ಟ್ ಪ್ರಕರಣಗಳಲ್ಲಿ ಸಿಕ್ಕು ಒದ್ದಾಡುವ ಸಾಧ್ಯತೆ ಇರುತ್ತದೆ. ಆದಾಯಕ್ಕಿಂತ ಖರ್ಚು ಜಾಸ್ತಿಯಾಗುತ್ತದೆ.

ಹರಿತವಾದ ಅಪಾಯಕಾರಿ ವಸ್ತುಗಳು : ಚಾಕು, ಕತ್ತರಿ, ಸೂಜಿಯಂತಹ ಹರಿತವಾದ ವಸ್ತುಗಳನ್ನು ದಾನ ಮಾಡಿದ್ರೆ ದರಿದ್ರ ಬರುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಜಗಳವಾಗುವ ಸಾಧ್ಯತೆಗಳಿರುತ್ತವೆ.

ಮುರಿದ ವಸ್ತುಗಳು : ಮುರಿದ ಆಟಿಕೆಗಳು ಮತ್ತು ಹರಿದ ಬಟ್ಟೆಗಳನ್ನು ಯಾರಿಗೂ ಕೊಡಬೇಡಿ. ಅಂಥಹ ವಸ್ತುಗಳನ್ನು ದಾನವಾಗಿ ಪಡೆದರೆ ಅವರು ಕೂಡ ಸಂತೋಷಪಡುವುದಿಲ್ಲ.

ಪೊರಕೆ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪೊರಕೆ ಲಕ್ಷ್ಮಿ ದೇವತೆಯನ್ನು ಕೆರಳಿಸುತ್ತಂತೆ. ಹಾಗಾಗಿ ಪೊರಕೆಯನ್ನು ದಾನ ಮಾಡಿದ್ರೆ ಆರ್ಥಿಕ ನಷ್ಟವಾಗುತ್ತದೆ.

ಪ್ಲಾಸ್ಟಿಕ್ ವಸ್ತುಗಳು : ಬಕೆಟ್, ಕುರ್ಚಿ, ಕಸದ ಬುಟ್ಟಿಯಂತಹ ಪ್ಲಾಸ್ಟಿಕ್ ವಸ್ತುಗಳನ್ನು ಕೂಡ ದಾನ ಮಾಡಬೇಡಿ. ಅವುಗಳನ್ನು ದಾನ ಮಾಡುವುದರಿಂದ ನಿಮ್ಮ ವೃತ್ತಿ ಬದುಕಿಗೆ ತೊಡಕು ಉಂಟಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read