ತನ್ನ ಸಂಗಾತಿಯಿಂದ ಬೇರ್ಪಟ್ಟ ಇಟಲಿ ಪ್ರಧಾನಿ ಜಾರ್ಜಿಯಾ; ದೂರವಾಗಲು ಕಾರಣವಾಯ್ತು ‘ಆ ಕಮೆಂಟ್’

Italy PM splits from partner after his sexist TV comments

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ತಮ್ಮ ಸಂಗಾತಿ ಆಂಡ್ರಿಯಾ ಗಿಯಾಂಬ್ರುನೊ ಅವರಿಂದ ಬೇರ್ಪಟ್ಟಿದ್ದಾರೆ. ಟಿವಿ ಜರ್ನಲಿಸ್ಟ್ , ತಮ್ಮ ಜೀವನದ ಪಾಲುದಾರ ಆಂಡ್ರಿಯಾ ಗಿಯಾಂಬ್ರುನೊ ಅವರಿಂದ ಬೇರ್ಪಟ್ಟಿರುವುದಾಗಿ ಜಾರ್ಜಿಯಾ ಮೆಲೋನಿ ಅಧಿಕೃತವಾಗಿ ತಿಳಿಸಿದ್ದಾರೆ.

ಇತ್ತೀಚಿಗೆ ಕಾರ್ಯಕ್ರಮ ಪ್ರಸಾರದ ವೇಳೆ ಮಹಿಳೆಯರು, ಲೈಂಗಿಕತೆ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದ ಆಂಡ್ರಿಯಾ ಗಿಯಾಂಬ್ರುನೊ ಟೀಕೆಗೆ ಗುರಿಯಾಗಿದ್ದರು.

“ಸುಮಾರು 10 ವರ್ಷಗಳ ಕಾಲ ಆಂಡ್ರಿಯಾ ಗಿಯಾಂಬ್ರುನೊ ಅವರೊಂದಿಗಿನ ನನ್ನ ಸಂಬಂಧವು ಇಲ್ಲಿಗೆ ಕೊನೆಗೊಳ್ಳುತ್ತದೆ” ಎಂದು ಮೆಲೋನಿ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಬರೆದಿದ್ದಾರೆ. “ನಮ್ಮ ಮಾರ್ಗಗಳು ಸ್ವಲ್ಪ ಸಮಯದವರೆಗೆ ಭಿನ್ನವಾಗಿವೆ, ಮತ್ತು ಅದನ್ನು ಒಪ್ಪಿಕೊಳ್ಳುವ ಸಮಯ ಬಂದಿದೆ” ಎಂದು ಅವರು ಹೇಳಿದರು. ಈ ದಂಪತಿಗೆ ಏಳು ವರ್ಷದ ಮಗಳಿದ್ದಾಳೆ.

ಗಿಯಾಂಬ್ರುನೋ ಅವರು MFE ಮಾಧ್ಯಮ ಗುಂಪಿನ ಭಾಗವಾದ ಮೀಡಿಯಾಸೆಟ್‌ನಿಂದ ಪ್ರಸಾರವಾದ ಸುದ್ದಿ ಕಾರ್ಯಕ್ರಮದ ನಿರೂಪಕರಾಗಿದ್ದಾರೆ.

ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಸಂತ್ರಸ್ತೆಯನ್ನು ದೂಷಿಸಿದ ಹೇಳಿಕೆಗಾಗಿ ಆಗಸ್ಟ್ ನಲ್ಲೇ ಆಂಡ್ರಿಯಾ ಗಿಯಾಂಬ್ರುನೊ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು.

ಈ ವೇಳೆ ಜಾರ್ಜಿಯಾ ಮೆಲೋನಿ, ತನ್ನ ಸಂಗಾತಿಯ ಹೇಳಿಕೆಗೆ ನನ್ನನ್ನು ದೂಷಿಸುತ್ತಾ ನಿರ್ಣಯಿಸಬೇಡಿ. ಭವಿಷ್ಯದಲ್ಲಿ ಅವರ ಇತಹ ಹೇಳಿಕೆಗಳಿಗೆ ಉತ್ತರಿಸುವುದಿಲ್ಲ ಎಂದಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read